ನಾಳೆ ದುರ್ಗಾಂಬಾ ಮಹಾರಥೋತ್ಸವ
ಶೃಂಗೇರಿ: ಶ್ರೀ ಶಾರದಾ ಪೀಠದ ಕ್ಷೇತ್ರಪಾಲಕಿ ಗೇವತೆ ಹರಾವರಿ ದುರ್ಗಾಂಬೆ ಮಹಾರಥೋತ್ಸವ ಮಾರ್ಚ್ 19 ರ ಮಂಗಳವಾರ ಜರುಗಲಿದೆ.
ಜಗದ್ಗುರು ಶ್ರೀ ಶಂಕರ ಭಗವತ್ಪಾದಾಚಾರ್ಯರು ಶೃಂಗೇರಿಯಲ್ಲಿ ಶಾರದಾಂಬೆಯನ್ನು ಪ್ರತಿಷ್ಠಾಪಿಸಿದ ನಂತರ ಶ್ರೀ ಕ್ಷೇತ್ರದ ರಕ್ಷಣೆಗಾಗಿ ಯಾವುದೇ ರೀತಿಯ ತೊಂದರೆಗಳು ಉಂಟಾಗದಂತೆ ನಾಲ್ಕು ದಿಕ್ಕುಗಳಲ್ಲಿಯೂ ನಾಲ್ಕು ರಕ್ಷಣಾ ದೇವತೆಗಳನ್ನು ಸ್ಥಾಪಿಸಿದ್ದರು. ಇವುಗಳಲ್ಲಿ ಶ್ರೀ ದುರ್ಗಾಂಬೆ ಪ್ರಮುಖ ದೇವತೆಯಾಗಿದೆ.
ಪಾಲ್ಗುಣ ಮಾಸ ಶುಕ್ಲ ಪಕ್ಷದ ಮೃಗಶಿರ ನಕ್ಷತ್ರದಂದು ಶ್ರೀ ದುರ್ಗಮ್ಮನವರಿಗೆ ಮಹಾರಥೋತ್ಸವ ನೆರವೇರಲಿದೆ.
ಅಂದು ದುರ್ಗಮ್ಮನವರಿಗೆ ವಿಶೇಷ ಪೂಜೆ ನೆರವೇರಲಿದೆ. ದಧ್ಯನ್ಯ ಹಾಗೂ ಪಾಯಸನ್ನ ನೈವೇದ್ಯ ಇಲ್ಲಿನ ವಿಶಿಷ್ಟ ಸೇವೆ. ಭಕ್ತಾದಿಗಳು ದುರ್ಗಾಂಬೆ ಸನ್ನಿಧಿಯಲ್ಲಿ ದುರ್ಗಾಸಪ್ತಶತಿ ಪಾರಾಯಣ, ತುಲಾಭಾರ ಸೇವೆ, ಕುಂಕುಮಾರ್ಚನೆ ಸೇವೆ ಇತ್ಯಾದಿ ಸೇವೆಗಳನ್ನು ಮಾಡಿಸುತ್ತಾರೆ.ಈ ಜಾತ್ರಾ ಮಹೋತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳುತ್ತಾರೆ.
ಇಂದು ಶಾಶ್ವತ ನೀರಾವರಿಗೆ ಒತ್ತಾಯಿಸಿ ಜಾಥಾ
ತರೀಕೆರೆ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಶಾಖೆಯಿಂದ 18 ರಂದು ಬೆಳಿಗ್ಗೆ 8ಕ್ಕೆ ತರೀಕೆರೆ ತಾಲೂಕಿನ ಸಮಗ್ರ ಹಾಗೂ ಶಾಶ್ವತ ನೀರಾವರಿಗಾಗಿ ಒತ್ತಾಯಿಸಿ ಅಜ್ಜಂಪುರ ಬಸ್ಟ್ಯಾಂಡ್ ನಿಂದ ತರೀಕೆರೆ ವರೆಗೆ ಕಾಲ್ನಡಿಗೆ ಜಾಥಾ ಏರ್ಪಡಿಸಲಾಗಿದೆ.