ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬೆಸ್ಕಾಂ ನೋಟಿಸ್: ಕಾಫಿ ಬೆಳೆಗಾರಗೆ ಆತಂಕ

Lingaraj Badiger
Updated On : 18 Mar 2013, 10:36 am

ಮೂಡಿಗೆರೆ: ಮಲೆನಾಡಿನ ಜನರು ತಲಾತಲಾಂತರದಿಂದ ಕಾಫಿಯನ್ನೆ ನಂಬಿಕೊಂಡು ಜೀವನ ನಡೆಸುತ್ತಿದ್ದು, ಅಂತಹ ಬೆಳೆಗಾರರು ಈಗ ಪಂಪ್‌ಸೆಟ್‌ಗಳ ಬಿಲ್ ಪಾವತಿಸದಿದ್ದಲ್ಲಿ ಸಂಪರ್ಕ ಕಡಿತ ಗೊಳಿಸುವುದಾಗಿ ಮೆಸ್ಕಾಂ ನೋಟಿಸ್ ಜಾರಿ ಮಾಡಿ ಬೆಳೆಗಾರರನ್ನು ಆತಂಕ್ಕೀಡು ಮಾಡಿದೆ ಎಂದು ಕೆಜಿಎಫ್ ತೀರ್ಥ ಮಲ್ಲೇಶ್ ಆರೋಪಿಸಿದರು.
 ಪಟ್ಟಣದ ಮುಡಿಗೆರೆ ಕ್ಲಬ್ ಆವರಣದಲ್ಲಿ ತಾಲೂಕು ಬೆಳೆಗಾರರ ಸಂಘ ಕರೆದಿದ್ದ ಸಭೆಯಲ್ಲಿ ಮಾತನಾಡಿ, ವಿದ್ಯುತ್ ನಿಗಮ ಕಾಫಿಯನ್ನು ಕಮರ್ಷಿಯಲ್ ಕ್ರಾಪ್ ಎಂದು ಪರಿಗಣಿಸಿ ವಂಚಿಸುತ್ತಿದೆ. ಕಾಫಿ ಬೆಳೆಗಾರರು ಕಾಡು ಪ್ರಾಣಿಗಳ ಹಾವಳಿ ಹಾಗೂ ಕೂಲಿ ಕಾರ್ಮಿಕರ ಕೊರತೆಯನ್ನು ಕಂಗೆಟ್ಟು ಹೋಗಿದ್ದಾರೆ. ಲೋಟೆನ್ಸನ್‌ನಲ್ಲಿದ್ದ ಕಾಫಿ ಬೆಳೆಯನ್ನು ಯಾವ ಮಾನದಂಡದಲ್ಲಿ ಹೈಟೆನ್ಸನ್‌ಗೆ ಬದಲಾಗಿದೆ ಎಂದು ಮೆಸ್ಕಾಂ ಇಲಾಖೆಯ ಅಧಿಕಾರಿಗಳನ್ನು ವಿಚಾರಿಸಿದರೆ ಅಸಮರ್ಪಕ ಉತ್ತರ ನೀಡುತ್ತಿದ್ದಾರೆ. ಅವೈಜ್ಞಾನಿಕ ಕ್ರಮದಿಂದ ಬೆಳೆಗಾರರಿಗೆ ನಷ್ಟವುಂಟಾಗಿದೆ ಎಂದು ಅವರು ಅಸಮಧಾನ ವ್ಯಕ್ತ ಪಡಿಸಿದರು.
ಹಾಸನ ಬೆಳೆಗಾರರ ಸಂಘದ ಅಧ್ಯಕ್ಷ ಕೃಷ್ಣ ಭಟ್ ಮಾತನಾಡಿ, ಕಾಫಿ ಬೆಳೆಯನ್ನು ಹೈಟೆನ್ಸನ್ ವ್ಯಾಪ್ತಿಯಲ್ಲಿಡುವುದರ ಮೂಲಕ ವಿದ್ಯುತ್ ಬಿಲ್ ಏರಿಸಿರುವುದನ್ನು ವಿರೋಧಿಸಿ ಹಾಸನ ಬೆಳೆಗಾರರ ಸಂಘ ಹೈಕೋರ್ಟಿನಲ್ಲಿ ಮೊಕದ್ದಮೆ ಹೂಡಿದೆ ಎಂದರು.
ಬೆಳೆಗಾರರ ಸಂಘದ ಅಧ್ಯಕ್ಷ ಬಸವರಾಜ್, ಕೆಜಿಎಫ್ ಅಧ್ಯಕ್ಷ ಡಾ. ಪ್ರದೀಪ್ ಕುಮಾರ್, ಮಂಜುನಾಥ್ ಗೌಡ, ಪುಟ್ಟಸ್ವಾಮೇಗೌಡ, ಸುಬ್ಬೇಗೌಡ, ರಘು, ಬಾಲಕೃಷ್ಣ, ಅಣ್ಣಪ್ಪಗೌಡ, ಇದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement