ಲಕ್ಕವಳ್ಳಿಯಲ್ಲಿ 9ನೇ ವರ್ಷದ ಶಾಲಾ ವಾರ್ಷಿಕೋತ್ಸವ
ಕನ್ನಡಪ್ರಭ ವಾರ್ತೆ, ತರೀಕೆರೆ, ಮಾ.17
ಸಮೀಪದ ಲಕ್ಕವಳ್ಳಿ ವಿಜಯಲಕ್ಷ್ಮಿ ಎಜುಕೇಶನ್ ಟ್ರಸ್ಟ್‌ನ ಪೂರ್ಣಚಂದ್ರ ಹಿ.ಪ್ರಾ.ಶಾಲೆಯ 9ನೇ ವರ್ಷದ ವಾರ್ಷಿಕೋತ್ಸವವನ್ನು ಸರ್ಕಾರಿ ಹಿ.ಬಾಲಕೀಯರ ಪಾಠಶಾಲೆ ಆವರಣದಲ್ಲಿ ಏರ್ಪಡಿಸಲಾಗಿತ್ತು.
ಟ್ರಸ್ಟ್ ಅಧ್ಯಕ್ಷ ಬಿ.ಬಿ. ನಾರಾಯಣಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ರಾಜೇಶ್ವರಿ ನಂದಕುಮಾರ್ ಉದ್ಘಾಟನೆ ನೆರವೇರಿಸಿ ಮಾತನಾಡಿ, ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು. ಜಿಪಂ ಸದಸ್ಯ ಕೆ.ಪಿ. ಕುಮಾರ್, ಗ್ರಾಪಂ ಉಪಾಧ್ಯಕ್ಷ ಮೆಹಬೂಬಿ, ಗ್ರಾಪಂ ಸದಸ್ಯ ಅಬ್ದುಲ್ ರೆಹಮಾನ್, ಜಗದೀಶ್, ಬಸವರಾಜಯ್ಯ, ಎಲ್.ಎನ್. ರಂಗನಾಥ್, ಫಯಾಜ್, ಪೂರ್ಣಿಮಾ ದೇವರಾಜ್ ಇದ್ದರು. ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.