ವರ್ಷೋತ್ಸವ
ಕ.ಪ್ರ.ವಾರ್ತೆ, ತರೀಕೆರೆ, ಮಾ.. 17
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತರೀಕೆರೆ ತಾಲೂಕು ವತಿಯಿಂದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪುರಸಭೆ ವಲಯ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮ ವತಿಯಿಂದ ಭಾನುವಾರ ಪಟ್ಟಣದ ಎಸ್.ಜೆ.ಎಂ.ಕಾಲೇಜು ಸಭಾಂಗಣದಲ್ಲಿ ಜ್ಞಾನ ವಿಕಾಸ ಕೇಂದ್ರಗಳ ವರ್ಷೋತ್ಸವ ಏರ್ಪಡಿಸಲಾಗಿತ್ತು.
ಜಿಪಂ ಸದಸ್ಯರಾದ ಸುಧಾ ಅಮೃತೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಧ.ಗ್ರಾ. ಯೋಜನೆಯ ಯೋಜನಾಧಿಕಾರಿ ಎಂ.ಡಿ. ಮಹೇಶ್ ಮಾತನಾಡಿದರು.
ಮಮತಾ ಮಹಿಳಾ ಸಮಾಜದ ಮಾಜಿ ಅಧ್ಯಕ್ಷೆ ಶ್ಯಾಮಲ ಮಂಜುನಾಥ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸಂಸ್ಕಾರ ಮತ್ತು ಸಂಸ್ಕೃತಿ ಕುರಿತು ಮಾತನಾಡಿದರು. ಪುರಸಭಾ ಮಾಜಿ ಅಧ್ಯಕ್ಷೆ ಗಿರಿಜಮ್ಮ ಅಧ್ಯಕ್ಷತೆ ವಹಿಸಿದ್ದರು. ಸಮನ್ವಯಾಧಿಕಾರಿ ಎಸ್. ಮಲ್ಲಮ್ಮ, ನಾಗರತ್ನಮ್ಮ, ಮೇಲ್ವಿಚಾರಕರಾದ ದಿನೇಶ್ ಗೌಡ, ಸೇವಾ ಪ್ರತಿನಿಧಿಗಳು, ಜೆವಿಕೆ ಸಂಯೋಜಕರು ಉಪಸ್ಥಿತರಿದ್ದರು.