ಸುವರ್ಣ ಗ್ರಾಮ ಯೋಜನೆಯಿಂದ ಉತ್ತಮ ಪರಿಸರ
ತರೀಕೆರೆ: ಸುವರ್ಣ ಗ್ರಾಮ ಯೋಜನೆಯಿಂದ ಗ್ರಾಮದಲ್ಲಿ ಉತ್ತಮ ಪರಿಸರ ನಿರ್ಮಾಣವಾಗುತ್ತದೆ ಎಂದು ಶಾಸಕ ಡಿ.ಎಸ್. ಸುರೇಶ್ ತಿಳಿಸಿದ್ದಾರೆ.
ಸಮೀಪದ ಗುಳ್ಳದಮನೆ ಗ್ರಾಮದಲ್ಲಿ 28 ಲಕ್ಷ ರು.ಗಳ ಸುವರ್ಣ ಗ್ರಾಮ ಯೋಜನೆಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಗುಳ್ಳದಮನೆ ಗ್ರಾಮವನ್ನು ಸುವರ್ಣ ಗ್ರಾಮ ಯೋಜನೆ ಪಟ್ಟಿಗೆ ಸೇರಿಸಲು ಕಳೆದ ಎರಡು ವರ್ಷದಿಂದ ಬೇಡಿಕೆ ಇತ್ತು, ಸರ್ಕಾರ ಇದೀಗ ತಾಲೂಕಿನ 17 ಗ್ರಾಮಗಳನ್ನು ಸುವರ್ಣ ಗ್ರಾಮ ಯೋಜನೆಗೆ ಸೇರಿಸಿದೆ. ಗ್ರಾಮದ ರಸ್ತೆಗಳ ಕಾಮಗಾರಿಯನ್ನು ನಿರ್ಮಿತಿ ಕೇಂದ್ರದವರಿಗೆ ವಹಿಸಲಾಗಿದೆ. ಕಾಮಗಾರಿಯಲ್ಲಿ ದೋಷ ಕಂಡುಬಂದರೆ ಕೂಡಲೆ ಗಮನಕ್ಕೆ ತನ್ನಿ ಎಂದು ಅವರು ಮನವಿ ಮಾಡಿ, ಸಮೀಪದ ಐನಳ್ಳಿ ಗ್ರಾಮದಲ್ಲಿ ಬೋರ್ವೆಲ್ ಕೊರೆಸಲು ಶೀಘ್ರದಲ್ಲೇ ವ್ಯವಸ್ಥೆ ಮಾಡಲಾಗುವುದು ಎಂದರು.
ತಾಪಂ ಸದಸ್ಯ ಬಿ.ಆರ್. ರವಿ, ಗುಳ್ಳದಮನೆ ವಸಂತಕುಮಾರ್ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ದಾಸಪ್ಪ, ಚಂದ್ರಶೇಖರ್ ಮಾತನಾಡಿದರು. ಜಯ್ಯಣ್ಣ, ಕರಿಯಪ್ಪ, ಗಂಗಮ್ಮ, ಪಿಡಿಒ ಪಾರ್ವತಮ್ಮ ಇದ್ದರು.
ತಾಂತ್ರಿಕ ದೋಷ: ಮತ್ತೊಮ್ಮೆ ಬಯೋವುಟ್ರಿಕ್
ಚಿಕ್ಕಮಗಳೂರು: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ 2010 ಡಿಸೆಂಬರ್ ಗಿಂತ ಮೊದಲು ಖಾಯಂ ಪಡಿತರ ಚೀಟಿ ಪಡೆದಿರುವ ಪಡಿತರ ಚೀಟಿದಾರರಿಂದ ಸಂಗ್ರಹಿಸಿದ ಬೆರಳಚ್ಚು ಬಯೋವುಟ್ರಿಕ್ ತಾಂತ್ರಿಕ ದೋಷದಿಂದ ನಿಷ್ಪ್ರಯೋಜಕವಾಗಿರುವ ಹಿನ್ನೆಲೆಯಲ್ಲಿ ಅವರ ಬಯೋವುಟ್ರಿಕ್ ಮತ್ತೊಮ್ಮೆ ಪಡೆಯುವುದು ಅನಿವಾರ್ಯವಾಗಿರುತ್ತದೆ.
ನಗರ ಪ್ರದೇಶ ವಾಸಿಗಳು ಆರ್.ಸಿ.ಆರ್.ಇ.ಎನ್ ರೇಷನ್ ಕಾರ್ಡ್ ಸಂ. ನಮೂದಿಸಿ 9212357123 ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್. ಮಾಡಬೇಕು ಆಗ ಸದರಿಯವರ ಮೊಬೈಲ್ಗೆ ಟೋಕನ್ ನಂಬರ್ ಹಾಗೂ ಸೆಕ್ಯೂರಿಟಿಕೋಡ್ ಬರುತ್ತದೆ. ಈ ನಂಬರ್ ಹಾಗೂ ಖಾಯಂ ಪಡಿತರ ಚೀಟಿಯೊಂದಿಗೆ ಫ್ರಾಂಚೈಸಿ ಸೆಂಟರ್ನಲ್ಲಿ 12 ವರ್ಷ ಮೇಲ್ಪಟ್ಟ ಎಲ್ಲಾ ಕುಟುಂಬದ ಸದಸ್ಯರು ಬಯೋವುಟ್ರಿಕ್ನಲ್ಲಿ ಮಾ. 31 ರೊಳಗೆ ನೀಡಲು ಸೂಚಿಸಿದೆ.
ಗ್ರಾಮೀಣ ಭಾಗದವರಿಗೆ ಏಪ್ರಿಲ್ ಮಾಹೆಯಲ್ಲಿ ಬಯೋವುಟ್ರಿಕ್ಗಳನ್ನು ಸಂಬಂಧಿಸಿದ ಗ್ರಾಮ ಪಂಚಾಯಿತಿ ಕಚೇರಿ ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ. ಸೇವಾ ಶುಲ್ಕವನ್ನು 50 ಪ್ರತಿ ಪಡಿತರ ಚೀಟಿಗೆ ನಿಗದಿಪಡಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಕಟಣೆ ತಿಳಿಸಿದೆ.