23ರಂದು ಯುವ ಸಂಘಗಳ ಕ್ರೀಡಾಕೂಟ
ಚಿಕ್ಕಮಗಳೂರು: ಜಿಲ್ಲಾ ನೆಹರು ಯುವ ಕೇಂದ್ರವು ಕಡೂರು ತಾಲೂಕಿನ ಗಿರಿಯಾಪುರ ಗ್ರಾಮದ ಯುವಜನ ಕೂಟ ಮತ್ತು ಮಲ್ಲಿಕಾಂಭ ಮಹಿಳಾ ಮಂಡಳಿಯ ಸಹಯೋಗದಲ್ಲಿ ಮಾ.23ರಂದು ಗಿರಿಯಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ಅಂತರ ಯುವ ಸಂಘಗಳ ಕ್ರೀಡಾಕೂಟ ಏರ್ಪಡಿಸಲಾಗಿದೆ.
ಯುವಕರಿಗಾಗಿ ವಾಲಿಬಾಲ್ ಪಂದ್ಯಾವಳಿ, ನೂರು ಮೀಟರ್ ಓಟದ ಸ್ಪರ್ಧೆ ಹಾಗೂ ಗುಂಡೆಸೆತದ ಸ್ಪರ್ಧೆಗಳಿರುತ್ತದೆ. ಮಹಿಳಾ ಮಂಡಳಿಯ ಸದಸ್ಯರಿಗಾಗಿ ಥ್ರೋಬಾಲ್, ನೂರು ಮೀಟರ್ ಓಟದ ಸ್ಪರ್ಧೆ ಹಾಗೂ ಗುಂಡೆಸೆತ ಇರುತ್ತದೆ.
ವಿಜೇತರಿಗೆ ಆಕರ್ಷಕ ಬಹುಮಾನದೊಂದಿಗೆ ಪ್ರಮಾಣ ಪತ್ರ ವಿತರಿಸಲಾಗುವುದು. ಲಘು ಭೋಜನದ ವ್ಯವಸ್ಥೆಯಿರುತ್ತದೆ. ಯಾವುದೇ ರೀತಿಯ ಪ್ರಯಾಣ ಭತ್ಯೆ ಇರುವುದಿಲ್ಲ. ಕಡೂರು ತಾಲೂಕಿನಲ್ಲಿ ಅಸ್ತಿತ್ವದಲ್ಲಿರುವ ನೋಂದಾಯಿತ ಯುವಕ ಸಂಘಗಳು, ಮಹಿಳಾ ಮಂಡಳಿಗಳಿಗೆ ಪಾಲ್ಗೊಳ್ಳಲು ಕೋರಲಾಗಿದೆ. ಮಾಹಿತಿಗೆ ಶಿವಕುಮಾರ್, ಯುವಜನ ಕೂಟ, ಗಿರಿಯಾಪುರ (ಮೊ- 9902313233) ಸಂಪರ್ಕಿಸಲು ಕೋರಲಾಗಿದೆ.