ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

25ರಿಂದ ರೈತಪರ ಸಂಘಟನೆಗಳ ಧರಣಿ

Lingaraj Badiger
Updated On : 19 Mar 2013, 10:41 am

ಶೃಂಗೇರಿ: ಗೋರಕ್‌ಸಿಂಗ್ ವರದಿ, ಸಾಲ ಮನ್ನಾ, ಪರಿಹಾರ ಪ್ಯಾಕೇಜ್ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾ.25ರಿಂದ ರೈತಪರ ಸಂಘಟನೆಗಳು ಪಟ್ಟಣದ ತಾಲೂಕು ಕಚೇರಿ ಮುಂಬಾಗದಲ್ಲಿ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ನಡೆಸಲಿವೆ. ತಾಲೂಕಿನ ಎಲ್ಲಾ ರೈತ ಬಾಂಧವರು ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಬೆಂಬಲ ನೀಡಬೇಕೆಂದು ಮನವಿ ಮಾಡಿದ್ದಾರೆ.
ಮಲೆನಾಡಿನ ಪರಂಪರೆ ತೇಜಸ್ವಿ ಬರಹಗಳಲ್ಲಿದೆ
ನರಸಿಂಹರಾಜಪುರ: ಮಲೆನಾಡಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಸಾಹಿತಿ ಕುವೆಂಪು, ತೇಜಸ್ವಿ ಅವರ ಬರಹಗಳಲ್ಲಿ ಕಾಣಬಹುದು ಎಂದು ಶೃಂಗೇರಿಯ ಕಿರುತೆರೆ ಕಲಾವಿದ ರಮೇಶ್ ಬೇಗಾರ್ ತಿಳಿಸಿದರು.  6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಥಮ ಗೋಷ್ಠಿಯಲ್ಲಿ ಮಲೆನಾಡಿನ ಪರಂಪರೆ ವಿಚಾರದ ಬಗ್ಗೆ ಉಪನ್ಯಾಸ ನೀಡಿದರು. ಮಲೆನಾಡು ಅದ್ಬುತ ಧಾರ್ಮಿಕ ಪರಂಪರೆ ಹೊಂದಿದೆ. ಆದಿ ಶಂಕರಾಚಾರ್ಯರ ಶೃಂಗೇರಿ ಮಠ, ಹರಿಹರಪುರ ಮಠ,ಬಂಡಿಗಡಿಮಠ, ರಾಮಚಂದ್ರಾಪುರ ಮಠಗಳು ಧಾರ್ಮಿಕ ಪರಂಪರೆಗೆ ಭದ್ರ ಬುನಾದಿ ಹಾಕಿದೆ.ನಮ್ಮ ದೇಶದ ದೊಡ್ಡ ಶಕ್ತಿಯಾದ ಜೈನ ಧರ್ಮ ಮಲೆನಾಡಿನ ಭಾಗದಲ್ಲಿದೆ. ಬಸ್ತಿಮಠ, ಹುಂಚ, ಕೊಪ್ಪ, ಮೂಡಿಗೆರೆಯಲ್ಲಿ ಜೈನ ಪಂರಪರೆ ಕಂಡು ಬಂದಿದೆ. ಮಲೆನಾಡಿನ ಜನ ಸಹಿಷ್ಣುತೆಯುಳ್ಳರಾಗಿದ್ದಾರೆ. ಒಂಟಿ ಮನೆಯಲ್ಲೇ ಹೆಚ್ಚಾಗಿ ವಾಸಿಸುವ ಪರಂಪರೆಯುಳ್ಳ ಮಲೆನಾಡಿನ ಜನರ ಸಂಸ್ಕೃತಿ ಕುವೆಂಪು ಅವರ ಕುಪ್ಪಳ್ಳಿ ಮನೆಯೇ ಉದಾಹರಣೆಯಾಗಿ ನಮ್ಮ ಮುಂದೆ ನಿಲ್ಲುತ್ತದೆ ಎಂದರು. ಮಂಗಳೂರಿನ ಜಕ್ಕಣಿಕೆ ದಯಾನಂದ ಮಲೆನಾಡಿನ ಸವಾಲುಗಳು ವಿಷಯದ ಬಗ್ಗೆ ಉಪನ್ಯಾಸ ನೀಡಿ, ಮಲೆನಾಡಿನ ಜನರು ಈಗ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿದ್ದಾರೆ. ಅಡಕೆ ಹಳದಿ ಎಲೆ ರೋಗ, ಹುಲಿ ಸಂರಕ್ಷಣೆ ಯೋಜನೆ, ಬೆಲೆ ಕುಸಿತ. ಕೃಷಿ ಕಾರ್ಮಿಕರ ಕೊರತೆಯಿಂದ ಕೃಷಿ ಯಾರಿಗೂ ಬೇಡವಾಗಿದ್ದು ಮಲೆನಾಡಿನ ಜನರ ಸವಾಲುಗಳಾಗಿದೆ ಎಂದರು.  ಸಭೆಯ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಹೊಸಕೊಪ್ಪ ಪ್ರಭಾಕರ ಕಾರಂತ್ ಮಾತನಾಡಿ, ಮಲೆನಾಡಿನ ಸಮಸ್ಯೆಗಳಿಗೆ ನಮ್ಮ ಮನ ಸ್ಥಿತಿಯೇ ಕಾರಣವಾಗಿದೆ. ಹಿಂದೆ ಪೂರ್ವಿಕರು ತಾವು ಬೆಳೆದ ವಸ್ತುಗಳನ್ನು ಸಾಗಿಸಲು ನೂರಾರು ಕಿ.ಮೀ.ದೂರದ ಪಟ್ಟಣಕ್ಕೆ ಎತ್ತಿನ ಗಾಡಿಯ ಮೂಲಕ ಸಾಗಿಸಬೇಕಾಗಿತ್ತು. ಈಗಿನ ಆಧುನಿಕ ನಾಗ ಲೋಟದಲ್ಲಿ ಎಲ್ಲಾ ಆಧುನಿಕ ಸೌಲಭ್ಯಗಳು ಬಂದಿದೆ. ಎಲ್ಲಾ ಸೌಕರ್ಯಗಳನ್ನು ಪಡೆದಿದ್ದರೂ ರೈತರ ಈಗಿನ ಮನಸ್ಥಿತಿ ಅತಿ ಆಸೆಗೆ ಮಾರು ಹೋಗಿ ತೃಪ್ತಿ ಎಂಬುದೇ ಇಲ್ಲದಿರುವುದೇ ಸಮಸ್ಯೆಗೆ ಮೂಲ ಕಾರಣವಾಗಿದೆ ಎಂದರು.  ತಾ.ಕಸಾಪ ಗೌರವ ಕಾರ್ಯದರ್ಶಿ ಡಾ. ಸಾಸ್ವೆಹಳ್ಳಿ ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇಂದು ರಥೋತ್ಸವ
ಶೃಂಗೇರಿ: ಇಲ್ಲಿನ ಶ್ರೀ ಶಾರದಾ ಪೀಠದ ರಕ್ಷಣಾ ದೇವತೆ ಹರಾವರಿ ದುರ್ಗಾಂಬಾ ಮಹಾರಥೋತ್ಸವ ಮಂಗಳವಾರ ನಡೆಯಲಿದೆ. ರಥೋತ್ಸವದ ಅಂಗವಾಗಿ ಗಣಪತಿ ಪೂಜೆ, ಧ್ವಜಾರೋಹಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ದೇವಿಗೆ ವಿಶೇಷ ಪೂಜೆ ನೆರವೇರಲಿದೆ. ಬುಧವಾರ ದಿನ ಸಂಧಾನೋತ್ಸವ, ಗುರುವಾರ ಅವಭೃತ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement