ಇಂದು ಕೆಜೆಪಿ ಸಭೆ
ಕ.ಪ್ರ ವಾರ್ತೆ, ಹರಿಹರ, ಮಾ.18
ತಾಲೂಕಿನ ಮಲೆಬೆನ್ನೂರಿನಲ್ಲಿ ಕರ್ನಾಟಕ ಜನತಾ ಪಕ್ಷದ ಬಹಿರಂಗ ಸಭೆ ಮಾ.19ರಂದು ನಡೆಯಲಿದ್ದು ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಲೆಬೆನ್ನೂರಿನ ನೀರಾವರಿ ಇಲಾಖೆ ಆವರಣದಲ್ಲಿ ಮಾ.19ರಂದು ಸಂಜೆ 6 ಗಂಟೆಗೆ ನಡೆಯಲಿರುವ ಸಭೆಯ ಅಧ್ಯಕ್ಷತೆಯನ್ನು ಕೆಜೆಪಿ ಪಕ್ಷದ ಗ್ರಾಮಾಂತರ ಘಟಕದ ಅಧ್ಯಕ್ಷ ಎಂ.ಸಿ. ಪರಮೇಶ್ವರಪ್ಪ ವಹಿಸಲಿದ್ದಾರೆ.
ಮಾಜಿ ಶಾಸಕ ಬಿ.ಪಿ. ಹರೀಶ್, ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ಕೆ. ಸೈಯದ್ ರೆಹಮಾನ್, ಮುಖಂಡರಾದ ಬಿ.ಎಂ. ವಾಗೀಶಸ್ವಾಮಿ, ರಮೇಶ ಮೆಹರ್ವಾಡೆ, ಸಿರಿಗೆರೆ ರಾಜಪ್ಪ, ಜಿ. ವೀರಯ್ಯ, ಶಹತಾಜ್ಬಾನು ಗಫಾರ್ ಖಾನ್, ಸಯ್ಯದ್ ಜಾಕೀರ್ಸಾಬ್, ಭೋವಿ ಕುಮಾರ್, ಬೇಳಕೆರಿ ಬಸಪ್ಪ, ರುಸ್ತುಮ್ ಅಲಿಸಾಬ್, ತಾಲೂಕಿನ ವಿವಿಧ ಮುಖಂಡರು ಕಾರ್ಯಕರ್ತರು ಭಾಗವಹಿಸಲಿದ್ದಾರೆ.