ಕಾಂಗ್ರೆಸ್ ಮಹಿಳೆಯರ ಧ್ವನಿಯಾಗಿದೆ: ಇಬ್ರಾಹಿಂ
ಕ.ಪ್ರ.ವಾರ್ತೆ,ದಾವಣಗೆರೆ, ಮಾ.18
ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರು ಮಹಿಳೆಯರಿಗೆ ಶೇ.50 ಮೀಸಲಾತಿ ನೀಡುವ ಸಂಪ್ರದಾಯಕ್ಕೆ ಮುನ್ನುಡಿ ಬರೆದ ಬದಲಾವಣೆಯ ಹರಿಕಾರರಾಗಿದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ಖಲೀಲುಲ್ಲಾ ತಿಳಿಸಿದರು.
ನಗರದ ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ಸಮುದಾಯ ಭವನದಲ್ಲಿ ಸೋಮವಾರ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಯುವ ಕಾಂಗ್ರೆಸ್ ಉತ್ತರ ವಲಯ ಏರ್ಪಡಿಸಿದ್ದ ಮಹಿಳಾ ಸಾಮಾಜಿಕ ಕಾರ್ಯಕರ್ತೆಯರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಪಾಲಿಕೆ ಸದಸ್ಯ ಶಿವಗಂಗಾ ಬಸವರಾಜ ಮಾತನಾಡಿದರು.ಉತ್ತರ ವಲಯ ಅಧ್ಯಕ್ಷ ಅರುಣಕುಮಾರ ಹುಲ್ಲುಮನೆ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಮುಖಂಡರಾದ ಸಿದ್ದಲಿಂಗಸ್ವಾಮಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹರೀಶ ಕೆಂಗಲಹಳ್ಳಿ, ನಗರ ಪಾಲಿಕೆ ಸದಸ್ಯರಾದ ಅನ್ನಪೂರ್ಣ ಪೂಜಾರ್, ರೇಣುಕಮ್ಮ ಕಾಂತರಾಜ, ಶ್ರೀಕಾಂತ ಬಗೇರಾ, ಮಾಯಕೊಂಡ ರವಿ, ಬಸವರಾಜ ಮತ್ತಿತರರು ಇದ್ದರು.
ದಾಕ್ಷಾಯಣಮ್ಮ ಮಲ್ಲಿಕಾರ್ಜುನ, ಲಲಿತಮ್ಮ , ಸಾಕಮ್ಮ, ನಸ್ರೀನ್ ತಾಜ್, ಎಂ. ಶೈಲಜಾ, ಪಿ.ಎಚ್. ಗೌರಮ್ಮ, ಮಮತಾ ಸುಬ್ರಹ್ಮಣ್ಯ, ಆರ್. ಲಕ್ಷ್ಮಿ, ರೇಣುಕಾ, ಅನ್ನಪೂರ್ಣಮ್ಮ ತಿಪ್ಪೇಸ್ವಾಮಿ, ಸುಜಾತಾ, ಬಸಮ್ಮ ಮಲ್ಲಿಕಾರ್ಜುನ, ಪತ್ರಕರ್ತೆ ದೇವಿಕಾರನ್ನು ಸನ್ಮಾನಿಸಲಾಯಿತು.