ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಚುನಾವಣಾ ಸೋಲು ಒಪ್ಪಿಕೊಳ್ಳುತ್ತೇವೆ

Lingaraj Badiger
Updated On : 19 Mar 2013, 10:42 am

ಕ.ಪ್ರ.ವಾರ್ತೆ,ದಾವಣಗೆರೆ, ಮಾ.18
ರಾಜ್ಯ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 5 ವರ್ಷಗಳ ಕಾಲ ಉತ್ತಮ ಕೆಲಸ ಮಾಡಿದ್ದರೂ, ಮತದಾರರು ಬಿಜೆಪಿಯನ್ನು ಈ ಚುನಾವಣೆಗಳಲ್ಲಿ ತಿರಸ್ಕರಿಸಿರುವುದನ್ನು ಒಪ್ಪಿಕೊಳ್ಳುತ್ತೇವೆ ಎಂದು ಸಕ್ಕರೆ, ತೋಟಗಾರಿಕೆ ಸಚಿವ ಎಸ್.ಎ. ರವೀಂದ್ರನಾಥ್ ತಿಳಿಸಿದರು.
ನಗರದ ಸಪ್ರದ ಕಾಲೇಜಿನ ಸಮಾರಂಭಕ್ಕೆ ಸೋಮವಾರ ಆಗಮಿಸಿದ್ದ ವೇಳೆ ಸುದ್ದಿಗಾರರೊಡನೆ ಮಾತನಾಡಿದ ಅವರು, ಬಿಜೆಪಿಯನ್ನು ಮತದಾರರು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲವೆಂದೋ, ತಮ್ಮ ಭಾವನೆಗೆ ಸ್ಪಂದಿಸಿಲ್ಲವೆಂಬ ಕಾರಣಕ್ಕೋ ತಿರಸ್ಕರಿಸಿದ್ದು, ಅದನ್ನು ನಾವು ಸಕಾರಾತ್ಮಕವಾಗಿ ಸ್ವೀಕರಿಸುತ್ತೇವೆ ಎಂದರು.
ಮತ್ತೊಂದು ಮಗ್ಗಲು: ರೊಟ್ಟಿ ಬೇಯಿಸುವಾಗ ಒಂದು ಮಗ್ಗಲು ಬೆಂದ ನಂತರ ಆ ರೊಟ್ಟಿ ತಿರುವಿ ಹಾಕುವುದು ಸಹಜ. ಅದೇ ರೀತಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ಸಿಗೆ ಕೈ ಹಿಡಿದ ಮತದಾರರು ಆ ಪಕ್ಷವನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರೊಟ್ಟಿ ತಿರುವಿ ಹಾಕಿದಂತೆ ಹಾಕುವುದೂ ನಿಶ್ಚಿತ. ಇದರಲ್ಲಿ ಯಾವುದೇ ಅನುಮಾನ ಬೇಡ. ಬಿಜೆಪಿ ಕೈಗೊಂಡ ಅಭಿವೃದ್ಧಿ ಕಾರ್ಯ, ಜನ ಪರ ಕಾರ್ಯಕ್ರಮ ಮುಂದಿಟ್ಟುಕೊಂಡು ಮತದಾರರ ಮನೆ ಬಾಗಿಲಿಗೆ ಹೋಗಲಿದೆ ಎಂದು ಸ್ಪಷ್ಟಪಡಿಸಿದರು.
ತಡೆಯುವ ಶಕ್ತಿ ಸಿದ್ದೇಶ್ವರ್‌ಗಿದೆ: ಹರಿಹರ ಮಾಜಿ ಶಾಸಕ ಬಿ.ಪಿ. ಹರೀಶ್ ಈಗಾಗಲೇ ಬಿಜೆಪಿ ತೊರೆದಿದ್ದು, ಚನ್ನಗಿರಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಕೆಜೆಪಿಗೆ ಸೇರುವ ಪ್ರಯತ್ನದಲ್ಲಿದ್ದಾರೆ.
ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಬೇರೆ ಪಕ್ಷದವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಸಕ್ಕರೆ, ತೋಟಗಾರಿಕೆ ಸಚಿವ ಎಸ್.ಎ. ರವೀಂದ್ರನಾಥ್ ತಿಳಿಸಿದರು.
 ಕೆಜೆಪಿ ಸೇರಿದಂತೆ ಅನ್ಯ ಪಕ್ಷಕ್ಕೆ ಹೋಗಲು ತುದಿಗಾಲ ಮೇಲೆ ನಿಂತವರನ್ನು ತಡೆಯುವ ಶಕ್ತಿ ಇರುವುದು ಸಂಸದ ಜಿ.ಎಂ. ಸಿದ್ದೇಶ್ವರಗೆ ಮಾತ್ರ. ಅನ್ಯ ಪಕ್ಷಕ್ಕೆ ಹೋಗುವ ಪ್ರಯತ್ನದಲ್ಲಿರುವವರನ್ನು ತಡೆಯಲು ಸಿದ್ದೇಶ್ವರ ಮುಂದಾಗಬೇಕಿದೆ.
   ಯಾರೇ ಹೋದರೂ ಹೊಸಬರ ಸಂಖ್ಯೆಯೂ ನಮ್ಮಲ್ಲಿ ಕಡಿಮೆಯೇನಿಲ್ಲ ಎದರು. ವಿಪ ಮುಖ್ಯ ಸಚೇತಕ ಡಾ. ಶಿವಯೋಗಿಸ್ವಾವು, ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜನಾಯ್ಕ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement