ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಒಗ್ಗಟ್ಟಿನ ಕೊರತೆಯಿಂದಾಗಿ ಸ್ಥಾನಮಾನ ಕೊರತೆ: ಆಚಾರ್ಯ

Mainashree
Updated On : 20 Mar 2013, 11:05 am

ನರಸಿಂಹರಾಜಪುರ್ಣ ಮಾ.19
ವಿಶ್ವಕರ್ಮ ಬ್ರಾಹ್ಮಣ ಸಮಾಜದವರ ಒಗ್ಗಟ್ಟಿನ ಕೊರತೆಯಿಂದಾಗಿ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂದು ಉಡುಪಿ ಜಿಲ್ಲೆಯ ವಿಶ್ವ ಕರ್ಮ ಒಕ್ಕೂಟದ ಉಪಾಧ್ಯಕ್ಷ ಸೀತಾರಾಮ ಆಚಾರ್ಯ ತಿಳಿಸಿದರು.
ಮಂಗಳವಾರ ಸಿಂಸೆಯ ವಿಶ್ವಕರ್ಮ ಸೇವಾ ಸಂಘದ ಆವರಣದಲ್ಲಿ ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕುಗಳು ಸೇರಿದಂತೆ ವಿಶ್ವಕರ್ಮ ಬ್ರಾಹ್ಮಣ ಒಕ್ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿ, ವಿಶ್ವಕರ್ಮ ಬ್ರಾಹ್ಮಣರು ಸಂಘಟಿತರಾದಾಗ ಮಾತ್ರ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಸಾಧ್ಯ. ಸಮಾಜದವರು ಒಂದೇ ಕುಟುಂಬದವರಂತೆ ಭಾವಿಸಿ ಸದಸ್ಯರ ಭಾವನೆಗಳಿಗೆ ಸ್ಪಂದಿಸಬೇಕು ಎಂದರು.
ತಾಲೂಕು ಒಕ್ಕೂಟ: ಕೊಪ್ಪ ತಾಲೂಕು ವಿಶ್ವ ಕರ್ಮ ಬ್ರಾಹ್ಮಣ ಸಮಾದ ಸೇವಾ ಸಂಘದ ಅಧ್ಯಕ್ಷ ಉಮೇಶ ಆಚಾರ್ಯ ಮಾತನಾಡಿ, ಶೈಕ್ಷಣಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ರಾಜಕೀಯವಾಗಿ ವಿಶ್ವಕರ್ಮ ಬ್ರಾಹ್ಮಣ ಸಮಾಜವನ್ನು ಮೇಲೆ ತರಬೇಕು ಎಂಬ ಉದ್ದೇಶದಿಂದ ಮೂರು ತಾಲೂಕುಗಳ ಒಕ್ಕೂಟವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಶೃಂಗೇರಿ ಕ್ಷೇತ್ರದ ವಿಶ್ವಕರ್ಮ ಬ್ರಾಹ್ಮಣ ಒಕ್ಕೂಟದ ಅಧ್ಯಕ್ಷ ಶ್ರೀಕಂಠ ಪುರೋಹಿತ್ ವಹಿಸಿದ್ದರು. ಅತಿಥಿಗಳಾಗಿ ನ.ರಾ.ಪುರ ವಿಶ್ವಕರ್ಮ ಸಮಾಜದ ಅಧ್ಯಕ್ಷ ಶಂಕರಾಚಾರ್ಯ, ಶಿರಾಳಕೊಪ್ಪದ ನಾಗರಾಜ್ ಆಚಾರ್ಯ, ಕುದುರೆಗುಂಡಿ ವಿಶ್ವಕರ್ಮ ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಮಚಂದ್ರ ಆಚಾರ್ಯ, ಮುದುಗುಣಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ.ಜೆ. ಮಹೇಶ ಆಚಾರ್ಯ, ನ.ರಾ.ಪುರ ಗಾಯತ್ರಿ ವಿಶ್ವ ಕರ್ಮ ಮಹಿಳಾ ಮಂಡಳಿ ಅಧ್ಯಕ್ಷೆ ಸುಮತಿ ಆಚಾರ್ಯ, ಕೊಪ್ಪ ವಿಶ್ವಕರ್ಮ ಮಹಿಳಾ ಸಮಾಜದ ಅಧ್ಯಕ್ಷೆ ಶೋಬಾ ಉಪೇಂದ್ರಾಚಾರ್ಯ, ನ.ರಾ.ಪುರ ವಿಶ್ವ ಕರ್ಮ ಸಮಾಜ ಸೇವಾ ಸಂಘದ ನಾರಾಯಣ ಆಚಾರ್ಯ, ಆನಂದಾಚಾರ್ಯ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement