ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವಿದ್ಯುತ್ ಮಾರ್ಗದಡಿ ಮನೆ ನಿರ್ಮಾಣ: ತೆರವಿಗೆ ಮನವಿ

Mainashree
Updated On : 20 Mar 2013, 11:04 am

ಚಿಕ್ಕಮಗಳೂರು: ನಗರದಲ್ಲಿ 66 ಕೆ.ವಿ.  ಪ್ರಸರಣ ಮಾರ್ಗವು ತಾಮ್ರದ ವಾಹಕವಾಗಿದ್ದು, ಕೆಂಪನಹಳ್ಳಿ, ಕಾಳಿದಾಸನಗರ, ರತ್ನಗಿರಿ, ರಾಮನಹಳ್ಳಿ, ಗೌರಿಕಾಲುವೆ ಮೂಲಕ ಹಾದುಹೋಗಿದೆ. ಸಾರ್ವಜನಿಕರು ಈ ಮಾರ್ಗಗಳಲ್ಲಿ ವಿದ್ಯುತ್ ಹರಿಯುತ್ತಿಲ್ಲ ಎಂದು ಭಾವಿಸಿ ಇದರ ಅಕ್ಕ ಪಕ್ಕ ಹಾಗೂ ವಾಹಕದ ಕೆಳಗೆ ಮನೆ ಕಟ್ಟಡ ನಿರ್ಮಿಸುತ್ತಿರುವುದು ಕಂಡುಬರುತ್ತಿದೆ.
66 ಕೆ.ವಿ. ಮಾರ್ಗದ ಎಡಕ್ಕೆ 9 ಮೀ. ಹಾಗೂ ಬಲಕ್ಕೆ 9 ಮೀ. ಒಟ್ಟು 18 ಮೀ. ಕಾರಿಡಾರ್‌ನಲ್ಲಿ ಯಾವುದೇ ಕಟ್ಟಡ ಮನೆ ನಿರ್ಮಾಣಕ್ಕೆ ಅವಕಾಶವಿರುವುದಿಲ್ಲ. ಆದರೆ, ಈ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಯಾವುದೇ  ರೀತಿಯ ಅವಘಡ, ಅಚಾತುರ್ಯ, ಅಪಘಾತ ಸಂಭವಿಸಿದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಜವಬ್ದಾರಿಯಾಗಿರುವುದಿಲ್ಲ.  
ಇದೀಗ ಅನಧಿಕೃತವಾಗಿ ಈ ಕಾರಿಡಾರ್‌ನಲ್ಲಿ ನಿರ್ಮಿಸಿರುವ ಕಟ್ಟಡಗಳನ್ನು ಇತರರಿಗೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement