ಸುದ್ದಿ ಸಂಕ್ಷೇಪ
ಲತಾಕುಮಾರಿಗೆ ಪಿಎಚ್.ಡಿ ಪದವಿ
ತರೀಕೆರೆ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಣಿತಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಜಿ.ಎನ್. ಲತಾಕುಮಾರಿ ಅವರಿಗೆ ಕುವೆಂಪು ವಿಶ್ವವಿದ್ಯಾನಿಲಯ ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ. ಲತಾಕುಮಾರಿ ಅವರು ಡಾ.ಎಸ್.ಕೆ. ನರಸಿಂಹಮೂರ್ತಿ ಅವರ ಮಾರ್ಗದರ್ಶನದಲ್ಲಿ “G ಸ್ಟಡಿ ಇನ್ ಪ್ರಜೆಕ್ಟೀವ್ ಚೇಂಜ್ ಆನ್ ಫಿನ್ಸ್ಲರ್ ಹೈಪರ್ ÑÚÁ鱿ÞÑé’ ಎಂಬ ಮಹಾಪ್ರಬಂಧವನ್ನು ಮಂಡಿಸಿದ್ದರು. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ನಡೆದ 23ನೇ ಘಟಿಕೋತ್ಸವ ಸಮಾರಂಭದಲ್ಲಿ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಎಸ್.ಎ. ಬಾರಿ ಅವರು ಲತಾಕುಮಾರಿ ಅವರಿಗೆ ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದರು.
ರಸ್ತೆ ಅಭಿವೃದ್ಧಿಗೆ ರು. 5ಕೋಟಿ ಬಿಡುಗಡೆ
ಮೂಡಿಗೆರೆ: ತೀವ್ರ ಹದೆಗೆಟ್ಟಿರುವ ಹಿರೇಬೈಲು-ಹೊರನಾಡು ರಸ್ತೆ ಮರು ಡಾಂಬರೀಕರಣಕ್ಕೆ 5 ಕೋಟಿ ರು. ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಪ್ರರಂಬಿಸಲಾಗುವುದು ಎಂದು ತಾಪಂ ಅಧ್ಯಕ್ಷ ಎಂ.ಎ. ಶೇಷಗಿರಿ ತಿಳಿಸಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿದ ಅವರು ಹಿರೇಬೈಲಿನಿಂದ ಹೊರನಾಡಿನವರೆಗೆ ರಸ್ತೆ ತೀವ್ರ ಹದೆಗೆಟ್ಟಿದ್ದು, ಇದನ್ನು ಮನಗಂಡ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿಯವರ ಆಸಕ್ತಿಯಿಂದ ಐದು ಕೋಟಿ ಬಿಡುಗಡೆಗೊಂಡಿದೆ. ಉತ್ತಮ ಗುಣಮಟ್ಟದಲ್ಲಿ ಕಾಮಗಾರಿ ನಡೆಯಲಿದೆ. ಅಲ್ಲದೆ ಕೊಟ್ಟಿಗೆಹಾರ-ಮಾಗುಂಡಿ-ಕಳಸ-ಎಸ್.ಕೆ. ಬಾರ್ಡರ್ವರೆಗೆ 23.50 ಕೋಟಿ ರು. ವೆಚ್ಚದ ರಸ್ತೆ ಮರು ಡಾಂಬರೀಕರಣದ ಕಾಮಗಾರಿ ಭರದಿಂದ ನಡೆಯುತ್ತಿದೆ. ಇದರಿಂದ ಹೋಬಳಿಯ ಬಹುತೇಕ ರಸ್ತೆಯ ಸಮಸ್ಯೆಗಳು ನಿವಾರಣೆಯಾಗಿದೆ ಎಂದು ತಿಳಿಸಿದ್ದಾರೆ.