ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಗೋರಖ್ ಸಿಂಗ್ ವರದಿ ಜಾರಿಗೆ ಒತ್ತಾಯ

Lingaraj Badiger
Updated On : 21 Mar 2013, 11:05 am

ಕ.ಪ್ರ.ವಾರ್ತೆ,ಕೊಪ್ಪ, ಮಾ.20
ಅಡಕೆ ಹಳದಿ ಎಲೆ ರೋಗ ಪೀಡಿತ ಸಂತ್ರಸ್ತ ರೈತರ ಸಂಕಷ್ಟಕ್ಕೆ ಪರಿಹಾರ ಸೂಚಿಸಿರುವ ಗೋರಕ್ ಸಿಂಗ್ ವರದಿ ಜಾರಿಗೆ ಒತ್ತಾಯಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆಯಲು ರೈತಸಂಘದಿಂದ ಕೊಪ್ಪ ತಾಲೂಕು ಕಚೇರಿ ಆವರಣದಲ್ಲಿ ಎರಡು ದಿನದ ಉಪವಾಸ ಸತ್ಯಾಗ್ರಹಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಕೇಂದ್ರ ಸರ್ಕಾರ ಗೋರಕ್ ಸಿಂಗ್ ವರದಿ ಜಾರಿ ಬಗ್ಗೆ ಕೇವಲ ಆಶ್ವಾಸನೆಯಲ್ಲೇ ದಿನಕಳೆಯುತ್ತಿದ್ದು, ರೈತರ ಬಗ್ಗೆ ನಿಜವಾದ ಕಾಳಜಿ ಹೊಂದಿಲ್ಲದ ಕಾರಣ ರೈತಸಂಘ ರೈತರ ಪರವಾಗಿ ಮುಂದಿನ ದಿನಗಳಲ್ಲಿ ಪ್ರಬಲ ಹೋರಾಟ ಮುಂದುವರಿಸಲಾಗುವುದು. ರೈತರ ಹಿತಕಾಯಬೇಕಾದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಚಿವರು, ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ಮರೆತು ರೈತರನ್ನು ಬಳಸಿಕೊಂಡು ಪಾದಯಾತ್ರೆ, ಧರಣಿ, ಸತ್ಯಾಗ್ರಹಗಳಲ್ಲಿ ಸಮಯ ಕಳೆಯುತ್ತಿದ್ದಾರೆ. ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಬ್ಯಾಂಕ್‌ಗಳು ಸಾಲ ವಸೂಲಿಗೆ ನೋಟಿಸ್ ನೀಡಿ ಬೆದರಿಸುವುದು, ಪೊಲೀಸ್ ಬಲ ಉಪಯೋಗಿಸಿ ವಸೂಲಿಗೆ ಮುಂದಾಗುವುದನ್ನು ನಿಲ್ಲಿಸಬೇಕು, ರೈತರ ಸ್ಥಿತಿಗತಿಯ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಪ್ರತಿಭಟನಕಾರರು   ಅಗ್ರಹಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಶಿವಪುರ ಹರೀಶ್, ಸುಧೀರ್ ಕುಮಾರ್ ಮರೊಳ್ಳಿ, ನವೀನ್ ಕುರುವಾನೆ, ಚಿಂತನ್ ಬೆಳಗೊಳ, ರವೀಂದ್ರ ವಗಳೆ, ಬೆಳ್ಳಿಯಪ್ಪ ಗೌಡ, ರತ್ನಾಕರ್, ಕಮಾಲಿಯಾ, ನಾರ್ವೆ ಅಶೋಕ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement