ಜೀತದಾಳು ಸಮೀಕ್ಷೆ ತರಬೇತಿ ಕಾರ್ಯಾಗಾರ
ಕ.ಪ್ರ.ವಾರ್ತೆ,ಮೂಡಿಗೆರೆ,ಮಾ.20
ಜೀತ ಪದ್ಧತಿ ಒಂದು ಬಲಾತ್ಕಾರದ ದುಡಿಮೆ ಪದ್ಧತಿಯಾಗಿದ್ದು, ಇದು ಆಧುನಿಕ ಕಾಲದ ಗುಲಾಮಿ ಪದ್ಧತಿಯಾಗಿದೆ ಎಂದು ಮೂಡಿಗೆರೆ ತಹಸೀಲ್ದಾರ್ ಸೈಯದ್ ಮುನೀರ್ ಅಭಿಪ್ರಾಯಪಟ್ಟರು.
ಮೂಡಿಗೆರೆ ತಾಲೂಕು ಪಂಚಾಯಿತಿ ಆವರಣದಲ್ಲಿ ಬೆಂಗಳೂರಿನ ಜೀತ ವಿಮುಕ್ತಿ ಸಂಘಟನೆಯಿಂದ ಹಮ್ಮಿಕೊಳ್ಳಲಾಗಿದ್ದ ಜೀತದಾಳು ಸಮೀಕ್ಷೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪಪಂ ಮುಖ್ಯಾಧಿಕಾರಿ ಗಣೇಶ್ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕೋಮರಯ್ಯ ಜೀತ ಪದ್ಧತಿ ನಿರ್ಮೂಲನೆಗೆ ಗ್ರಾಪಂ ಪಾತ್ರದ ಬಗ್ಗೆ ಹಾಗೂ ಮಹಿಳೆಯರ ಆರ್ಥಿಕ ಮಟ್ಟ ಸುಧಾರಣೆಯಿಂದ ಜೀತ ನಿರ್ಮೂಲನೆ ಬಗ್ಗೆ ವಿವರಣೆ ನಿಡಿದರು. ಗಂಗಮ್ಮಯ್ಯ, ಬಸವರಾಜಯ್ಯ ಎನ್.ಕೆ., ಕೆಂಪಲಕ್ಷ್ಮಮ್ಮ, ಗ್ರಾಪಂನ ವಿವಿಧ ಇಲಾಖೆಗಳಿಂದ ಆಗಮಿಸಿದ ಅಧಿಕಾರಿ, ಸಿಬ್ಬಂದಿಗೆ ತರಬೇತಿ ನೀಡಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ. ಗಂಗಾಧರ್ ಉಪಸ್ಥಿತರಿದ್ದರು.