ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮನೆ ಬಾಗಿಲಿಗೆ ಕಸದ ಬಕೆಟ್ ವಿತರಣೆ

Lingaraj Badiger
Updated On : 21 Mar 2013, 11:13 am

ಕ.ಪ್ರವಾರ್ತ್ಣೆ ನರಸಿಂಹರಾಜಪುರ್ಣ ಮಾ.20
ಮನೆಯಲ್ಲಿ ಕಸದ ರಾಶಿಯಿದ್ದರೆ ಚಿಂತೆ ಬೇಡ. ಕಸ ಹಾಕಲು ಕಲರ್, ಕಲರ್ ಬಕೆಟ್ ನೀಡಲು ಪಟ್ಟಣ  ಪಂಚಾಯ್ತಿಯವರು ನಿಮ್ಮ ಮನೆ ಬಾಗಿಲಿಗೆ ಬರುತ್ತಿದ್ದಾರೆ.
ಮನೆಗಳ ಕಸವನ್ನು ರಸ್ತೆಗೆ ಎಸೆದರೆ ನಗರದ ಶುಚಿತ್ವ, ಅಂದವೇ ಹಾಳಾಗುತ್ತದೆ. ಈ ಬಗ್ಗೆ ಚಿಂತನೆ ನಡೆಸಿದ  ಹಿಂದಿನ ಪಟ್ಟಣ ಪಂಚಾಯ್ತಿಯ ಕೌನ್ಸಿಲ್ ಸಭೆ ಪರಿಹಾರವಾಗಿ ಕೆಲವು ನಿರ್ಣಯ ತೆಗೆದುಕೊಂಡಿತ್ತು. ಅದರಂತೆ  ಪ್ರತಿ ಮನೆಗೂ ಕೆಂಪು ಹಾಗೂ ಹಸಿರು ಬಣ್ಣದ ಪ್ಲಾಸ್ಟಿಕ್ ಬಕೆಟ್ ನೀಡುವುದು, ಕೊಳೆಯುವ ಕಸವನ್ನು ಹಸಿರು ಬಕೆಟ್‌ಗೆ ಹಾಗೂ ಕೊಳೆಯದ ಕಸಗಳಾದ ಕಬ್ಬಿಣ, ಗ್ಲಾಸ್, ಪ್ಲಾಸ್ಟಿಕ್ ಮುಂತಾದ ವಸ್ತುಗಳನ್ನು ಕೆಂಪು  ಬಕೆಟ್‌ನಲ್ಲಿ ಸಂಗ್ರಹಿಸಿಡಬೇಕು. ಬೆಳಿಗ್ಗೆ ಮನೆಯ ಮುಂದೆ ಗಂಟೆ ಬಾರಿಸುತ್ತಾ ತಳ್ಳುವ ಗಾಡಿ ಬಂದಾಗ ಹಸಿರು  ಬಕೆಟ್‌ನಲ್ಲಿ ಸಂಗ್ರಹವಾದ ಕೊಳೆಯುವ ಕಸವನ್ನು ತಳ್ಳುವ ಗಾಡಿಗೆ ಹಾಕಬೇಕು. ಪ್ರತಿ ಮನೆ ಮುಂದೆ ಬರುವ  ತಳ್ಳುವ ಗಾಡಿಯಲ್ಲಿ ಸಂಗ್ರಹವಾದ ಕೊಳೆಯುವ ಕಸವನ್ನು ನಿರ್ದಿಷ್ಟ ಜಾಗದಲ್ಲಿ ನಿಂತ ಪಟ್ಟಣ ಪಂಚಾಯ್ತಿಯ  ಟ್ರಾಕ್ಟರ್‌ಗೆ ಹಾಕಲಾಗುತ್ತದೆ. ಕೊಳೆಯದ ಕಸ ಇರುವ ಕೆಂಪು ಬಕೆಟ್‌ನಲ್ಲಿ ಸಂಗ್ರಹವಾದ ಗಟ್ಟಿ ಕಸಗಳನ್ನು ಪ್ರತಿ ವಾರಕ್ಕೊಮ್ಮೆ ಸಂಗ್ರಹಿಸಲಾಗುತ್ತದೆ. ಬಕೆಟ್‌ನಲ್ಲಿ ಸಂಗ್ರಹಿಸುವ ಈ ಕಸ ವಿಲೇವಾರಿ ಯೋಜನೆ ಈಗ ಜಾರಿಗೆ ಬಂದಿದ್ದು ಪಟ್ಟಣದ ಮನೆ, ಮನೆಗಳಿಗೆ ಹಸಿರು ಹಾಗೂ ಕೆಂಪು ಬಕೆಟ್ ವಿತರಿಸಲಾಗುತ್ತಿದೆ.
2500 ಬಕೆಟ್ ವಿತರಣೆ: ಈ ಯೋಜನೆ ಬಗ್ಗೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ನಾಗೇಂದ್ರ 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ಈಗಾಗಲೇ ರು. 3 ಲಕ್ಷ ವೆಚ್ಚದಲ್ಲಿ ಪಟ್ಟಣದ ಅಸೆಸ್‌ಮೆಂಟ್ ಇರುವ 1250 ಮನೆಗಳಿಗೆ ತಲಾ 2 ಬಕೆಟ್‌ನಂತೆ ಒಟ್ಟು 2500 ಬಕೆಟ್ ವಿತರಿಸಲಾಗಿದೆ.
ಅಸೆಸ್‌ಮೆಂಟ್ ಇಲ್ಲದ ಮನೆಗಳಿಗೆ ಮುಂದಿನ ದಿನಗಳಲ್ಲಿ ಬಕೆಟ್ ನೀಡಲಾಗುವುದು. ಸಂಗ್ರಹಿಸಿದ ಕಸವನ್ನು ಟ್ರಾಕ್ಟರ್ ಮೂಲಕ ನಾಗಲಾಪುರ ಗ್ರಾಮದ  ರಾವೂರು ಸಮೀಪದಲ್ಲಿರುವ 2 ಎಕರೆಯ ಕಸ ವಿಲೇವಾರಿ ಜಾಗಕ್ಕೆ ಹಾಕಲಾಗುತ್ತಿದೆ. ಮುಂದಿನ ದಿನಗಳಲ್ಲಿ  ಕಸವನ್ನು ಹರಾಜು ಮಾಡಲಾಗುವುದು. ಪ್ಲಾಸ್ಟಿಕ್‌ಗಳನ್ನು ಈಗಾಗಲೇ ಮೂಟೆಗಳಲ್ಲಿ ಸಂಗ್ರಹ ಮಾಡಲಾಗಿದ್ದು ಅದನ್ನು ಸಹ ಹರಾಜು ಹಾಕಲಾಗುವುದು. ಪಟ್ಟಣದ ನೈರ್ಮಲ್ಯವೇ ಪಟ್ಟಣ ಪಂಚಾಯ್ತಿಯ ಉದ್ದೇಶ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement