ಅಕ್ರಮ ಮದ್ಯ ತಡೆಗೆ ಆಗ್ರಹಿಸಿ ಧರಣಿ
ಕ.ಪ್ರ. ವಾರ್ತೆ, ಚಿಕ್ಕಮಗಳೂರು, ಮಾ. 21
ನಗರದ ಹೊರ ವಲಯದಲ್ಲಿರುವ ಉಪ್ಪಳ್ಳಿಯ ಕಲ್ಲುದೊಡ್ಡಿಯಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ತಡೆಯುವಂತೆ ಆಗ್ರಹಿಸಿ ಸ್ಥಳೀಯರು ಗುರುವಾರ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು.
ಸ್ಥಳೀಯರಾದ ರಾಜು ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಉಪ್ಪಳ್ಳಿ, ಶಾಂತಿನಗರ ಬಡಾವಣೆಯಲ್ಲಿ ಬಡವರು ವಾಸವಾಗಿದ್ದು, ಕೂಲಿಯನ್ನು ಅವಲಂಬಿಸಿದ್ದಾರೆ. ಬಂದ ಹಣವನ್ನು ಕುಡಿಯಲು ಖರ್ಚು ಮಾಡುತ್ತಿದ್ದಾರೆ. ಕೂಡಲೇ ಈ ಅಕ್ರಮ ಮದ್ಯವನ್ನು ತಡೆ ಹಿಡಿಯಬೇಕು ಎಂದು ಆಗ್ರಹಿಸಿದರು.