ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನರ್ಸ್ ಅತ್ಯಾಚಾರಕ್ಕೆ ಯತ್ನಿಸಿದ ಬಸ್ ಚಾಲಕ

Lingaraj Badiger
Updated On : 22 Mar 2013, 11:18 am

ಕ.ಪ್ರ. ವಾರ್ತೆ,ಮೂಡಿಗೆರೆ,ಮಾ.21
ತಾಲೂಕಿನ ಕಳಸ ಹೋಬಳಿಯ ತಲಗೋಡು ಗ್ರಾಮದಲ್ಲಿ ನರ್ಸ್ ಒಬ್ಬರ ಮೇಲೆ ಖಾಸಗಿ ಬಸ್ ಚಾಲಕನೊಬ್ಬ ಮಾನಭಂಗಕ್ಕೆ ಪ್ರಯತ್ನಿಸಿದ ಘಟನೆ ನಡೆದಿದೆ.
ಕಳಸ ಪಟ್ಟಣದ ಖಾಸಗಿ ಬಸ್ ಸೆಂಸ್ಥೆಯಲ್ಲಿ ಚಾಲಕನಾಗಿರುವ ತನೂಡಿ ಗ್ರಾಮದ ಚಿದಂಬರ್ ಎಂಬಾತನೇ ಅತ್ಯಾಚಾರ ಯತ್ನ ನಡೆಸಿರುವ ಆರೋಪಿ.
ಈತ ಬುಧವಾರ ಸಂಜೆ ಸುಮಾರು 6.45 ಸಮಯದಲ್ಲಿ ತಲಗೋಡು ಗ್ರಾಮದ ಸ್ನೇಹ ಕ್ಲಿನಿಕ್‌ನ ಬಳಿ ಆರೋಗ್ಯ ಸರಿ ಇಲ್ಲ ಎಂಬ ನೆಪದಲ್ಲಿ ಕ್ಲಿನಿಕ್ ಒಳ ಹೋಗಿದ್ದಾನೆ. ಈ ಸಂದರ್ಭ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾನೆ. ಯುವತಿ ಕೂಗಿಕೊಂಡಾಗ, ಕೊಂದು ಹಾಕುವುದಾಗಿ ಬೆದರಿಕೆ ಒಡ್ಡಿ, ಪಕ್ಕದಲ್ಲಿದ್ದ ರೂಂಗೆ ಎಳೆದುಕೊಂಡು ಹೋಗಿ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾನೆ. ಆಗ ಆಕೆ ಕಿರುಚಿಕೊಂಡಿದ್ದರಿಂದ ಆಕೆಯ ಮೇಲೆ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಪರಾರಿಯಾಗುವ ಸಂದರ್ಭದಲ್ಲಿ 8 ಗ್ರಾಂ ಚಿನ್ನದ ಸರವನ್ನು ಕದ್ದೊಯ್ದಿದ್ದಾನೆ ಎಂದು ಹಲ್ಲೆಗೊಳಗಾಗಿದ್ದ ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆಗೊಳಗಾದ ನರ್ಸ್ ಕಳಸದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ತಾಲೂಕು ಪಂಚಾಯುತ್ ಅಧ್ಯಕ್ಷ ಎಂ.ಎ. ಶೇಷಗಿರಿ, ಕಳಸ ಗ್ರಾಪಂ ಅಧ್ಯಕ್ಷೆ ಉಷಾ, ಮಹಿಳಾ ಸಂಚಾಲಕಿ ಮಮ್ತಾಜ್ ಬೇಗಂ, ನಾಗೇಶ್,ನಾಗಭೂಷಣ್ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿ, ಆರೋಪಿಯನ್ನು ಕೂಡಲೇ ಬಂಧಿಸಲು ಒತ್ತಾಯಿಸಿದ್ದಾರೆ.
ಈ ಸಂಬಂಧ ಕಳಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳಸ ಠಾಣಾಧಿಕಾರಿ ರಾಮಚಂದ್ರ ನಾಯಕ್ ಸ್ಥಳ ಪರಿಶೀಲನೆ ಮಾಡಿ ಆರೋಪಿಗಾಗಿ ಬಲೆ ಬೀಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement