ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನೀತಿಸಂಹಿತೆ ಹಿನ್ನೆಲೆ: ಅಹೋರಾತ್ರಿ ಧರಣಿ ಮೊಟಕು

Lingaraj Badiger
Updated On : 22 Mar 2013, 11:19 am

ಕ.ಪ್ರ. ವಾರ್ತೆ,ಕೊಪ್ಪ,ಮಾ.21
ರೈತಸಂಘ ಮತ್ತು ಹಸಿರುಸೇನೆ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ 2 ದಿನದ ಅಹೋರಾತ್ರಿ ಧರಣಿಯನ್ನು ಚುನಾವಣೆ ನೀತಿಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ 1ದಿನಕ್ಕೆ ಮೊಟಕುಗೊಳಿಸಲಾಗಿದೆ ಎಂದು ರೈತ ಮಂಖಡ ನವೀನ್ ರವಾನೆ ತಿಳಿಸಿದ್ದಾರೆ.
 ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರೈತರ ಸಮಸ್ಯೆಗಳನ್ನು ಗಮನಿಸಿ ಉಸ್ತುವಾರಿಯಲ್ಲಿರುವ ಸರ್ಕಾರವಾದರೂ ಕೂಡ ಚುನಾವಣಾ ಆಯೋಗದ ಗಮನಕ್ಕೆ ತಂದು ರೈತರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಗಮನಹರಿಸಬೇಕೆಂದು ರೈತ ಸಂಘ ಆಗ್ರಹಿಸುತ್ತದೆ ಎಂದರು.   ಕೆ.ಸಿ.ಸತೀಶ್, ಕೆ.ಎಸ್. ಬೆಳ್ಳಿಯಪ್ಪಗೌಡ, ಸುಧೀರ್ ಕುಮಾರ್ ಮರೋಳ್ಳಿ, ಚಿಂತನ್ ಬೆಳಗೋಳ, ಗಣೇಶ್ ಶೆಟ್ಟಿ, ಕಮಾಲಿ, ಶಿವಪುರ ಹರೀಶ್, ಶೋಭಿಂತ್,  ಸುಭದ್ರಮ್ಮ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement