ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕೆಜೆಪಿಯಲ್ಲಿ ಬಂಡಾಯ ಹೊಗೆ

Mainashree
Updated On : 24 Mar 2013, 10:39 am

ಶಿವಮೊಗ್ಗ: ಕರ್ನಾಟಕ ಜನತಾ ಪಕ್ಷವು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯಾಗಿ ಮಾಜಿ ಸಚಿವ ಜಿ. ಬಸವಣ್ಯಪ್ಪ ಅವರ ಹೆಸರು ಘೋಷಿಸಿದ ನಂತರ ಅಲ್ಲಿಲ್ಲಿ ಅಸಮಾಧಾನ ಭುಗಿಲ್ಲೆದ್ದಿದ್ದು, ಸರಣಿ ಕಾರ್ಯಕರ್ತರ ಸಭೆಗಳು ಶುರು ಆಗಿರುವುದು ಪಕ್ಷಕ್ಕೆ ಆತಂಕ ಮೂಡಿಸಿದೆ.
 ಇತ್ತ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹಲವು ತಿಂಗಳುಗಳಿಂದಲೇ ಚುನಾವಣೆ ಸಿದ್ಧತೆ ನಡೆಸುತ್ತಿದ್ದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಅವರಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಣೆಯಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಎಲ್ಲ ಪಕ್ಷಗಳಿಗಿಂತ ಮೊದಲು ಟಿಕೆಟಟ್ಘೋಷಣೆ ಮಾಡಿದ್ದ ಕರ್ನಾಟಕ ಜನತಾ ಪಕ್ಷವು ಇದರ ಜತೆಗೆ ರಾಜಕೀಯ ಸಂಕಷ್ಟಗಳನ್ನೂ ಎದುರಿಸಬೇಕಾಗಿದೆ.
ಅಶೋಕ್ ಬಂಡಾಯ: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಪ್ರಭಲ ಆಕಾಂಕ್ಷಿಗಳಲ್ಲೊಬ್ಬರಾಗಿದ್ದ ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಬಿ. ಅಶೋಕ್ ನಾಯ್ಕ್ ಅವರಿಗೆ ಟಿಕೆಟ್ ದೊರೆಯದ ಕಾರಣ ಅವರೀಗ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲು ಕ್ಷೇತ್ರಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ಶನಿವಾರ ಸಂಜೆ ಅವರ ಜಿಲ್ಲಾ ಪಂಚಾಯ್ತಿ ಸ್ವಕ್ಷೇತ್ರದಲ್ಲಿ ಸಭೆ ನಡೆದಿದ್ದು, ಭಾನುವಾರ ಹಾಗೂ ಸೋಮವಾರ ಉಳಿದ 6 ಜಿ.ಪಂ. ಕ್ಷೇತ್ರಗಳಲ್ಲಿ ನಡೆಯಲಿವೆ.
 ಈ ಬಗ್ಗೆ ಅಶೋಕ್ ನಾಯ್ಕ್ ಅವರನ್ನು ಕನ್ನಡಪ್ರಭ ಸಂಪರ್ಕಿಸಿದಾಗ, ಇನ್ನೆರಡು ದಿನಗಳಲ್ಲಿ ಸಭೆ ನಡೆಯುತ್ತೆ. ಸ್ಪಷ್ಟ ಅಭಿಪ್ರಾಯ ಪಡೆದು, ಮುನ್ನುಗ್ಗಿ ಅಂತ ಹೇಳಿದ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ತೀರ್ಮಾನ ಅವರೇ ಕೊಡಬೇಕು ಎಂದರು.
 ಇದೇ ಕ್ಷೇತ್ರದಿಂದ ಕೆಜೆಪಿ ಟಿಕೆಟ್‌ಗಾಗಿ ಪ್ರಯತ್ನಿಸಿದ್ದ ಎಲ್. ಶ್ರೀನಿವಾಸ ಬಾಬು ಅವರು ಬಸವಣ್ಯಪ್ಪ ಅವರಿಗೆ ಟಿಕೆಟ್ ನೀಡಿರುವುದನ್ನು ಒಪ್ಪಿಕೊಂಡಿದ್ದಾರೆ. ನಾನು ಬಿ.ಎಸ್. ಯಡಿಯೂರಪ್ಪ ಅವರ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಕೆಜೆಪಿ ಪಕ್ಷಕ್ಕೆ ಬಂದಿದ್ದೇನೆ. ಅವರ ತೀರ್ಮಾನ ಒಪ್ಪುತ್ತೇನೆ. ಕೆಜೆಪಿ ಬಿಡುವುದಾಗಲಿ ಅಥವಾ ಬೇರೆ ಯೋಚನೆ ಮಾಡುವುದಾಗಲಿ ಇಲ್ಲವೇ ಇಲ್ಲ ಎನ್ನುತ್ತಾರೆ.
ಇನ್ನಷ್ಟು ಸಂಕಷ್ಟ:
ಯಡಿಯೂರಪ್ಪ ನೇತೃತ್ವದ ಕೆಜೆಪಿ ಪಕ್ಷಕ್ಕೆ ಜಿಲ್ಲೆಯಲ್ಲಿ ಇನ್ನೂ ಸಂಕಷ್ಟಗಳು ಬಗೆಹರಿದಿಲ್ಲ. ಭದ್ರಾವತಿ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ಕಾಂಗ್ರೆಸ್ಪ್‌ಕ್ಷ ಈ ಕ್ಷೇತ್ರದ ಅಭ್ಯರ್ಥಿ ಘೋಷಿಸುವುದನ್ನು ಕೆಜೆಪಿ ಕಾಯುತ್ತಿದೆ.  ಇತ್ತ ತೀರ್ಥಹಳ್ಳಿ ಕ್ಷೇತ್ರದಿಂದ ಮೊದಲ ಪಟ್ಟಿಯಲ್ಲಿ ಆರ್.ಎಂ. ಮಂಜುನಾಥ ಗೌಡರ ಹೆಸರು ಘೋಷಣೆ ಆಗದಿರುವುದಕ್ಕೆ ಪಕ್ಷದ ಮೊದಲ ಪಟ್ಟಿಯಲ್ಲಿ 69 ಹೆಸರುಗಳು ಮಾತ್ರ ಇರಬೇಕೆಂಬ ಜ್ಯೋತಿಷಿಗಳ ಸೂಚನೆಯೇ ಕಾರಣ ಎಂದು ಪಕ್ಷದ ಮೂಲಗಳು ಹೇಳುತ್ತಿವೆ. ಎರಡು ಅಥವಾ ಮೂರನೇ ಪಟ್ಟಿಯಲ್ಲಿ ಅವರ ಹೆಸರು ಘೋಷಣೆಯಾಗುವುದು ಖಂಡಿತಾ ಎಂದು ಪಕ್ಷದ ಮೂಲ ತಿಳಿಸುತ್ತಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement