ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬಿಜೆಪಿ ಸಮಾವೇಶ

Mainashree
Updated On : 24 Mar 2013, 10:39 am

ಕ.ಪ್ರ.ವಾರ್ತೆ, ಕೊಪ್ಪ, ಮಾ. 23
ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರ್ಕಾರಿ ಕಾರ್ಯಕ್ರಮ ರದ್ದಾಗಿ ಪಕ್ಷದ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿತ್ತು. ಇದನ್ನು ಸಹಿಸಲಾಗದೇ ಕಾಂಗ್ರೆಸ್‌ನವರು ಚುನಾವಣಾಧಿಕಾರಿಗಳಿಗೆ ದೂರು  ನೀಡಿ ಗುರುವಾರ ನಡೆಯಬೇಕಿದ್ದ ಬಿಜೆಪಿ ಜಿಲ್ಲಾ ಕಾರ್ಯಕರ್ತರ ಸಮಾವೇಶಕ್ಕೆ ಅಡ್ಡಪಡಿಸಿದ್ದರು ಎಂದು  ಆಹಾರ, ನಾಗರಿಕ ಸಚಿವ ಡಿ.ಎನ್. ಜೀವರಾಜ್ ಹೇಳಿದರು.
 ಪಟ್ಟಣದ ಲಾಲ್ ಬಹುದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು ಅರ್ಧಗಂಟೆಯಲ್ಲಿ ಕಾರ್ಯಕ್ರಮ ಮುಂದೂಡಿದ ಬಗ್ಗೆ ಕಾರ್ಯಕರ್ತರಿಗೆ ಮಾಹಿತಿ ನೀಡಿ ಒಂದೇ ದಿನದಲ್ಲಿ 10,000 ಕ್ಕೂ ಹೆಚ್ಚು ಕಾರ್ಯಕರ್ತರ ಸಮಾವೇಶ ನಡೆಸುವ ಮೂಲಕ ವಿರೋಧಿಗಳಿಗೆ ನಮ್ಮ ಶಕ್ತಿ ಪ್ರದರ್ಶಿಸಿ ತಕ್ಕ ಉತ್ತರ ನೀಡಿದ್ದೇವೆ ಎಂದರು.
ರಸ್ತೆ ಅಭಿವೃದ್ಧಿ: 2004 ಕ್ಕಿಂತ ಮೊದಲು ಹಿಂದೆ ಹದಗೆಟ್ಟ ರಸ್ತೆಗಳಿಗೆ ಪ್ಯಾಚ್ ಹಾಕಲು ಜನ ಒತ್ತಾಯಿಸುವ ಸ್ಥಿತಿ ಇತ್ತು. ಈಗ ರಾಜ್ಯ ಹೆದ್ದಾರಿ ಮಾದರಿಯಲ್ಲಿ ರಸ್ತೆಗಳು ಅಭಿವೃಧ್ಧಿ ಹೊಂದಿವೆ. ಜನ ಕಾಂಕ್ರಿಟ್ ರಸ್ತೆ ಕೇಳುವ ಮಟ್ಟಕ್ಕೆ ಕ್ಷೇತ್ರ ಅಭಿವದ್ದಿ ಹೊಂದಿದೆ ಎಂದರು.
 ಕಾಂಗ್ರೆಸ್‌ನಲ್ಲೇ ಇದ್ದುಕೊಂಡು ಕೇಂದ್ರ ಸರ್ಕಾರಕ್ಕೆ ನ್ಯಾಯಾಂಗ ನಿಂದನೆ ಕೇಸು ಹಾಕುವ ಹುಸಿ ಹೋರಾಟಗಾರರ ಹಾಸ್ಯಾಸ್ಪದ ನಡವಳಿಕೆಗಳಿಂದ ಜನ ಬದಲಾಗುವುದಿಲ್ಲ. ರೈತ ಸಂಘದ ಹೆಸರಿನಲ್ಲಿ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿರುವ 5 ಮಂದಿ ಅಪಪ್ರಚಾರಿಗಳ ಯತ್ನಕ್ಕೆ ಹಿನ್ನಡೆಯಾಗಿ ಸದಾ ಜನರೊಂದಿಗೆ  ಸ್ಪಂದಿಸುತ್ತಿರುವ ತಾವು ಮತ್ತೆ ಈ ಚುನಾವಣೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು.   ಬಿಜೆಪಿ ಮುಖಂಡ ಈಶ್ವರಪ್ಪ, ಅನಂತ್ ಕುಮಾರ್, ಎಂ.ಪಿ. ಕುಮಾರ ಸ್ವಾಮಿ, ಸಿ.ಟಿ. ರವಿ, ಬಾನುಪ್ರಕಾಶ್, ರೇಖಾ ಹುಲಿಯಪ್ಪಗೌಡ, ಮಲೆನಾಡು ಅಭಿವೃದ್ಧಿ ಸಮಿತಿ ಮಂಜುನಾಥ, ಪ್ರಾಣೇಶ್,  ನಯನ, ರಾಮಸ್ವಾಮಿ, ಆಂಟೋನಿ, ಜಿಪಂ ಮತ್ತು ತಾಪಂ ಸದಸ್ಯರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement