ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಸಮಾವೇಶ ರದ್ದಾಗಲು ಗುಂಪುಗಾರಿಕೆ ಕಾರಣ'

Mainashree
Updated On : 24 Mar 2013, 10:38 am

ಕ.ಪ್ರ.ವಾರ್ತೆ, ಕೊಪ್ಪ, ಮಾ23
ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ನೀತಿ ಸಂಹಿತೆಯ ಕಾನೂನಿನ ಅನ್ವಯ ಮುಂದೂಡಲ್ಪಟ್ಟಿತ್ತೇ ಹೊರತು ಕಾಂಗ್ರೆಸ್ ಯಾವುದೇ ತಕರಾರನ್ನೂ ಸಲ್ಲಿಸಿರಲಿಲ್ಲ. ಅವರ ಪಕ್ಷದೊಳಗಿನ ಗುಂಪುಗಾರಿಕೆ ಮತ್ತು ಗೊಂದಲಗಳ ಕಾರಣ ಸಮಾವೇಶ ರದ್ದಾಗಿದ್ದು, ಕಾಂಗ್ರೆಸ್ ಪಕ್ಷವನ್ನು ದೂರುವುದು ಬಿಜೆಪಿಯವ ಮೂರ್ಖತ ತೊರಿಸುತ್ತದೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶೋಭಿಂತ್ ಹೇಳಿದರು.
 ಶನಿವಾರ ಪಟ್ಟಣದ ಶಾಂತ ಎಂಟರ್‌ಪ್ರೈಸಸ್‌ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ರಾಜಕಾರಣದಿಂದ ನಿವೃತ್ತಿ ಹೊಂದಿ ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿರುವ, ದೇಶಕ್ಕೆ ಮಾದರಿ ಆಡಳಿತದ ಮುನ್ನುಡಿ ಬರೆದ ಮಲೆನಾಡು ಗಾಂಧಿ ಗೋವಿಂದೇಗೌಡರ ಬಗ್ಗೆ ಕೆಳಮಟ್ಟದ ಮಾತುಗಳನ್ನು ಬಳಸುವುದನ್ನು ನಮ್ಮ ಪಕ್ಷ ಉಗ್ರವಾಗಿ ಖಂಡಿಸುತ್ತದೆ ಎಂದರು.
ತಕ್ಕಪಾಠ: ಶೃಂಗೇರಿ ಕ್ಷೇತ್ರದ ಸಂಸ್ಕೃತಿಗೆ ದಕ್ಕೆ ಬರುವ ರೀತಿ ಜೀವರಾಜ್ ಅವರು ವರ್ತಿಸುತ್ತಿರುವುದಕ್ಕೆ ಕ್ಷೇತ್ರದ ಪ್ರಜ್ಞಾವಂತ ಜನರು ತಕ್ಕ ಪಾಠ ಕಲಿಸುವುದು ಶತಃಸಿದ್ಧ.
 ಕಾಂಗ್ರೆಸ್‌ಗೆ ಹಲವಾರು ನಾಯಕರುಗಳನ್ನು ಸೃಷ್ಟಿಸುವ, ಸಂಭಾಳಿಸುವ ಶಕ್ತಿ ಮತ್ತು ಯೋಗ್ಯತೆ ಇದೆ. ಕೇವಲ ಕುಟಿಲ ರಾಜಕಾರಣದ ಮೂಲಕ ಭ್ರಷ್ಟ ಗುತ್ತಿಗೆದಾರರನ್ನು ಪೋಷಿಸುತ್ತಾ, ಇಡೀ ಪಕ್ಷವನ್ನೇ ಗುತ್ತಿಗೆದಾರಿಗೆ ಅಡಮಾನ ಮಾಡಿರುವ ಉಸ್ತುವಾರಿ ಸಚಿವರು ಗುತ್ತಿಗೆದಾರರಿಗೆ ನಾಯಕರೇ ಹೊರತು, ಈ ಕ್ಷೇತ್ರದ ಜನಸಾಮಾನ್ಯರಿಗಲ್ಲ ಎಂದರು.
 ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಚ್.ಜಿ. ವೆಂಕಟೇಶ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಶ್ರೀಧರ್, ಮಾಜಿ ಜಿಪಂ ಅಧ್ಯಕ್ಷ ಟಿ.ಡಿ. ರಾಜೇಗೌಡ, ಮುಖಂಡ ಒಡಿ ರತ್ನಾಕರ್, ನಾರ್ವೆ ಅಶೋಕ್, ನವೀನ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement