ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಸೂಯೆ ಸಮಾಜಕ್ಕೆ ಮಾರಕ: ಸಚಿವ ಜೀವರಾಜ್

Rashmi Kasaragodu
Updated On : 25 Mar 2013, 11:10 am

ಕ.ಪ್ರ.ವಾರ್ತೆ , ಕೊಪ್ಪ , ಮಾ.24
ಇನ್ನೊಬ್ಬರ ಏಳಿಗೆ ಸಹಿಸಲಾಗದೆ ಅಸೂಯೆಯಿಂದ ವರ್ತಿಸುವರು ತಮ್ಮ ವಿವೇಚನೆಯನ್ನು ಕಳೆದುಕೊಂಡು ಕೆಟ್ಟ ಅಲೋಚನೆ ಮಾಡುತ್ತಾ ಸಮಾಜಕ್ಕೆ ಮಾರಕವಾಗುವ ಚಿಂತನೆ ಮಾಡುತ್ತಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಡಿ.ಎನ್. ಜೀವರಾಜ್ ತಿಳಿಸಿದರು.
ಭಾನುವಾರ ತಾಲೂಕಿನ ಬಪ್ಪುಂಜಿ ಕೈಮರದ ಆರೂರು ರವಿ ಸ್ಮಾರಕ ಪ್ರೌಢಶಾಲೆ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುದುರೆಗುಂಡಿ ವಲಯದ ನುಗ್ಗಿ ಕಾರ್ಯಕ್ಷೇತ್ರದಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ ಹಾಗೂ ಒಕ್ಕೂಟಗಳ ಪದಗ್ರಹಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಹೋದರತ್ವ ಭಾವನೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಮಾಜದ ಎಲ್ಲಾ ಧರ್ಮದವರನ್ನು ಒಂದು ಗೂಡಿಸಿ ಅವರಲ್ಲಿ ಸಹೋದರತ್ವ ಭಾವನೆ ಮೂಡಿಸಿ ಅವರಿಗೆ ಸಾಲ ನೀಡುವುದರ ಜೊತೆಗೆ ಮರುಪಾವತಿಗೆ ವೃತ್ತಿಯನ್ನೂ ತೋರಿಸುವುದರ ಮೂಲಕ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಪೂಜಾ ಸಮಿತಿ ಅಧ್ಯಕ್ಷ ಎಚ್.ಆರ್. ಜಗದೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ಕ್ಷೇತ್ರದ ಯೋಜನೆ ಕಾರ್ಯಕ್ರಮಗಳು ರಾಜ್ಯದ ಅಭಿವೃದ್ಧಿಗೆ ಸಹಕಾರಿಯಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮೀಣ ಜನರ ಅರ್ಥಿಕ ಮತ್ತು ಸಾಮಾಜಿಕ ಭದ್ರತೆ ನೀಡುವುದರ ಜೊತೆಗೆ ಪ್ರತಿಯೊಬ್ಬ ವ್ಯಕ್ತಿಯನ್ನೂ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ವೇದಿಕೆ ರೂಪಿಸುತ್ತಿರುವುದು ಶ್ಲಾಘನೀಯ ಎಂದರು.
ಕೊರಡಿಹಿತ್ಲು ದಿ ಮೈಸೂರು ಪ್ಲಾಂಟೇಶನ್ ಮಾಲೀಕ ರಮೇಶ್ ರಾವ್, ಬೇರುಕುಡಿಗೆ ಎಸ್ಟೇಟ್ ಮಾಲೀಕರಾದ ವೆಂಕಟೇಶ್ ಭಟ್, ಯೋಜನಾಧಿಕಾರಿ ಸುಕೇಶ್, ಮಲ್ಲಿಕಾರ್ಜುನ ದೇವಸ್ಥಾನದ ಅರ್ಚಕ ರವಿ ಪಟವರ್ಧನ್ ಮೊದಲಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement