ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಧರಣಿ
ಶೃಂಗೇರಿ: ಪಟ್ಟಣದ ತಾಲೂಕು ಕಚೇರಿ ಎದುರು ಸೋಮವಾರ ರೈತಪರ ಸಂಘಟನೆಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ.
ಗೋರಖ್,ಸಿಂಗ್ ವರದಿ ಯಥಾವತ್ ಅನುಷ್ಠಾನ, ರೇತರ ಸಂಪೂರ, ಸಾಲಮನ್ನಾ, ಪರಿಹಾರ ಪ್ಯಾಕೇಜ್, ಪರ್ಯಾಯ ಬೆಳೆಗೆ ಪ್ರೋತ್ಸಾಹ ಧನ, ಬತ್ತ ಖರೀದಿ ಕೇಂದ್ರ ಸ್ಥಾಪನೆ, ರೈತರಿಗೆ ಸಮರ್ಪಕ ವಿದ್ಯುತ್ ನೀಡುವಿಕೆ ಇತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುವುದು. ಪ್ರತಿಭಟನೆಯಲ್ಲಿ ತಾಲೂಕಿನ ರೈತ ಬಾಂಧವರು, ರೈತಪರ ಸಂಘಟನೆಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ್ದಾರೆ.
ಏ.5ರಂದು ಶ್ರೀಗಳ ಆಗನಮ
ಶೃಂಗೇರಿ: ಇಲ್ಲಿನ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರು ವಿಜಯಯಾತ್ರೆ ಮುಗಿಸಿ ಏಪ್ರಿಲ್ 5ರಂದು ಶೃಂಗೇರಿಗೆ ಆಗಮಿಸಲಿದ್ದಾರೆ. ವಿಜಯಯಾತ್ರೆ ಪೂರೈಸಿ ಆಗಮಿಸುತ್ತಿರುವ ಶ್ರೀ ಗಳಿಗೆ ಭವ್ಯ ಸ್ವಾಗತ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಕೆರೆ ಬಳಕೆದಾರರ ಸಭೆ
ತರೀಕೆರೆ: ಉಬ್ರಾಣಿ ಕಸಬಾ ಹಾಗೂ ಅಮೃತಾಪುರ ಕಸಬಾ ಹೋಬಳಿಗಳ ನೀರು ಬಳಕೆದಾರರ ಸಹಕಾರ ಸಂಘದ ವತಿಯಿಂದ ಮಾ. 24 ರಂದು ಸಮೀಪದ ಅಮೃತಾಪುರದಲ್ಲಿ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಏರ್ಪಾಡಾಗಿದ್ದ ಉಬ್ರಾಣಿ ಅಮೃತಾಪುರ ಏತ ನೀರಾವರಿ ಕುರಿತು ಸಮಾಲೋಚನ ವಿಶೇಷ ಮಹಾ ಸಭೆಯು ಚುನಾವಣಾ ನೀತಿ ಸಂಹಿತೆ ಕಾರಣದಿಂದ ಮುಂದೂಡಲಾಗಿದೆ ಎಂದು ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಎ.ಎಸ್.ಈಶ್ವರಪ್ಪ ಅವರು ತಿಳಿಸಿದ್ದಾರೆ.
ಈಸ್ಟರ್,ಗೆ ಸಿದ್ಧತೆ
ಶಿವಮೊಗ್ಗ: ಶಿವಮೊಗ್ಗ ಧರ್ಮಪ್ರಾಂತ್ಯದ ಯುವನಿರ್ದೇಶನಾಲಯ, ಯುವಸಂಘಟನೆ, ಯುವಮಿತ್ರ (ಐ.ಸಿವೈ.ಎಂ, ವೈ.ಸಿ.ಎಸ್)ಆಶ್ರಯದಲ್ಲಿ ಶರಾವತಿನಗರದ ಬಾಲ ಯೇಸುವಿನ ದೇವಾಲಯದಲ್ಲಿ ಈಸ್ಟರ್ ಹಬ್ಬದ ಸಿದ್ಧತೆಗಾಗಿ ಆಹೋರಾತ್ರಿ ಪ್ರಾರ್ಥನೆ ಹಾಗೂ ಜೀವಂತ ಶಿಲುಭೆ ಹಾದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಧರ್ಮಪ್ರಾಂತ್ಯಕ್ಕೆ ಸೇರಿದ ಭದ್ರಾವತಿ, ಕಾರೇಹಳ್ಳಿ, ಸಾಗರ, ತೀರ್ಥಹಳ್ಳಿ, ಹಿರಿಯೂರು, ಹರಿಹರ, ಚಿತ್ರದುರ್ಗೆ ಧರ್ಮ ಕೇಂದ್ರದ ಯುವ ಜನರು ಆಗಮಿಸಿದ್ದರು.