ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮತದಾರರ ವಿಶ್ವಾಸ ಗಳಿಸಿ

Rashmi Kasaragodu
Updated On : 25 Mar 2013, 11:05 am

ಕ.ಪ್ರ.ವಾರ್ತೆ,ಚಿಕ್ಕಮಗಳೂರು, ಮಾ 24
ಚುನಾಯಿತಿ ಪ್ರತಿನಿಧಿಗಳು ಪಕ್ಷಾತೀತವಾಗಿ ಜನರ ಸಮಸ್ಯೆಗೆ ಸ್ಪಂಧಿಸಿ ವಿಶ್ವಾಸ ಗಳಿಸಿದಾಗ ಮಾತ್ರ ಅವರು ಮತ್ತೆ ಮತ್ತೆ ಪ್ರತಿನಿಧಿಗಳಾಗಿ ಆಯ್ಕೆಯಾಗಲು ಸಾಧ್ಯ ಎಂದು ಶಾರದಾ ಪೈ ಕಲ್ಯಾಣ ಮಂಟಪದ ಅಧ್ಯಕ್ಷ ಜಯಂತ್ ಪೈ ಹೇಳಿದ್ದಾರೆ.
ನಗರದ ಶಾರದಾ ಪೈ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ವತಿಯಿಂದ ನೂತನ ನಗರಸಭೆ ಸದಸ್ಯರಾದ ರವೀಂದ್ರ ಪ್ರಭು, ಶ್ಯಾಮಲ ಎಂ. ರಾವ್, ರಮೇಶ್ ರವರನ್ನು ಸನ್ಮಾನಿಸಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಮಾತ್ರ ಪಕ್ಷ, ನಂತರ ಪಕ್ಷ ಬೇಧ ಮತ್ತು ಜಾತಿ ಬೇಧ ಮಾಡದೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಎಲ್ಲರ ವಿಶ್ವಾಸ ಪಡೆದುಕೊಳ್ಳಬೇಕು ಎಂದರು.
ನಗರಸಭೆಯಿಂದ ವಾರ್ಡ್,ಗೆ ಆಗಬೇಕಾಗಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಹೆಚ್ಚಿನ ಗಮನ ನೀಡಿ, ಸರ್ಕಾರ ಯೋಜನೆಗಳನ್ನು ಅದರ ಫಲಾನುಭವಿಗಳಿಗೆ ನೀಡಲು ಮುಂದಾಗಬೇಕು. ಸಮಾಜದ ಏಳಿಗೆಗೂ ಶ್ರಮಿಸಿ ಎಲ್ಲರ ಪ್ರೀತಿ ವಿಶ್ವಾಸ ಗಳಿಸಬೇಕು ಎಂದರು.
ಡಾ. ಯಶ್ವಂತ್ ಪ್ರಭು, ಮುರಳೀಧರ್ ಕಿಣಿ, ದಾಮೋದರ್ ಪ್ರಭು, ಕೃಷ,ಭಟ್, ಮಹಿಳಾ ಮಂಡಳಿ ಅಧ್ಯಕ್ಷೆ ಅನಿತಾ ನರೇಂದ್ರ ಪೈ, ವ್ಯವಸ್ಥಾಪನ ಲಕ್ಷ್ಮಣ ಕಾಮತ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement