ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮೊಬೈಲ್ ಟವರ್ ನಿರ್ಮಾಣಕ್ಕೆ ಸ್ಥಳೀಯರ ವಿರೋಧ

Rashmi Kasaragodu
Updated On : 25 Mar 2013, 11:05 am

ಕ.ಪ್ರ.ವಾರ್ತೆ, ಕೊಪ್ಪ, ಮಾ 24
ಪಟ್ಟಣದ ಇಂದಿರಾನಗರ ಬಡಾವಣೆಯಲ್ಲಿ ಮೊಬೈಲ್ ಟವರ್ ನಿರ್ಮಿಸಲು ಸಿದ್ಧತೆ  ನಡೆಸುತ್ತಿರುವುದನ್ನು ತಕ್ಷಣದಲ್ಲಿ ತಡೆಯುವಂತೆ ಬಡಾವಣೆಯ ನಿವಾಸಿಗಳು ತಹಸೀಲ್ದಾರ್ ಲಿಂಗಪ್ಪ ಗೌಡರಿಗೆ ಮನವಿ ನೀಡಿದರು.
 ಈಗಾಗಲೇ ಇಂದಿರಾನಗರದ ಬಡವಾಣೆಯಲ್ಲಿ ಮೊಬೈಲ್ ಟವರ್ ನಿರ್ಮಾಣವಾಗಿದ್ದು, ಈ ಟವರ್,ನಿಂದ  ಪ್ರಸಾರವಾಗುವ ಕಿರಣಗಳಿಂದ ಆರೋಗ್ಯಕ್ಕೆ ಹಾನಿಯಾಗುತ್ತಿರುವುದಲ್ಲದೇ, ಇದರ ಪಕ್ಕದಲ್ಲಿ ವಾಸ ಮಾಡುತ್ತಿರುವವರಿಗೆ ಟವರ್,ಗೆ ಬಳಸುವ ಜನರೇಟರ್ ಶಬ್ದದಿಂದ ತೊಂದರೆಯಾಗುತ್ತಿದೆ ಎಂದರು.  ಇತ್ತೀಚೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಟವರ್ ನಿರ್ಮಾಣದ ಬಗ್ಗೆ ಕಠಿಣ ನಿಲುವು ತೆಗೆದುಕೊಂಡಿದ್ದು, ಈ ನಿಯಮಾವಳಿಯಂತೆ ಜನನಿಬಿಡ ಪ್ರದೇಶದಲ್ಲಿ ಹೆಚ್ಚು ಟವರ್ ನಿರ್ಮಿಸಲು ಅವಕಾಶ ಇರುವುದಿಲ್ಲವೆಂದು ತಿಳಿದುಬಂದಿದೆ. ಹೊಸ  ಟವರ್ ನಿರ್ಮಿಸದಂತೆ  ಸಂಬಂಧಿಸಿದರವರಿಗೆ ತಕ್ಷಣ ನಿರ್ದೇಶನ ನೀಡುವಂತೆ ಒತ್ತಾಯಿಸಿದರು. ಈ ಸಮಯದಲ್ಲಿ ನಿವಾಸಿಗಳಾದ ಪತ್ರಕರ್ತ ಶೇಷಾದ್ರಿ, ಸುಬ್ಬಣ,, ನಾಗರಾಜ್ ಮೊದಲಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement