ಸಣ, ಪತ್ರಿಕೆಗೆ ಸರ್ಕಾರ ವಿಶೇಷ ಜಾಹಿರಾತು ನೀಡಲಿ
ಕ.ಪ್ರ. ವಾರ್ತ, ನ.ರಾ.ಪುರ , ಮಾ.24
ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಜಿಲ್ಲಾ ಮಟ್ಟದ ಪತ್ರಿಕೆ ಹಾಗೂ ಸಣ, ಪತ್ರಿಕೆಗಳಿಗೆ ರಾಜ್ಯ ಸರ್ಕಾರವು ವಿಶೇಷ ಜಾಹಿರಾತು ನೀಡಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಪ್ರಥಮ ಮಾಧ್ಯಮ ಸಮ್ಮೇಳನದ ಸಮ್ಮೇಳಾಧ್ಯಕ್ಷ ಸ. ಗಿರಿಜಾಶಂಕರ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಭಾನುವಾರ ಬಾಳೆಹೊನ್ನೂರಿನಲ್ಲಿ ಜಿಲ್ಲಾ ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಜಿಲ್ಲಾ ಪ್ರಥಮ ಮಾಧ್ಯಮ ಸಮ್ಮೇಳನದಲ್ಲಿ ಸಮ್ಮೇಳಾಧ್ಯಕ್ಷರ ಭಾಷಣ ಮಾಡಿದರು.
ಗುಣಮಟ್ಟ ಕಡಿಮೆ: ಸಮಾಜದಲ್ಲಿ ಜಿಲ್ಲಾ ಹಾಗೂ ಸಣ, ಪತ್ರಿಕೆಗಳ ಪಾತ್ರ ಇಂದಿಗೂ ಸಹ ಪ್ರಸ್ತುತವಾಗಿದೆ. ಪತ್ರಿಕೆಗಳಿಂದ ಓದುಗರಿಗೆ ಶಿಕ್ಷಣ ಹಾಗೂ ವ್ಯಕ್ತಿತ್ವವು ವಿಕಸನಗೊಳ್ಳಲಿದೆ. ಆದರೆ, ಸ್ವಾತಂತ್ರ ಪೂರ್ವದ ಪತ್ರಿಕೆಗಳಿಗೆ ಹೋಲಿಸಿದರೆ ಇಂದಿನ ಪತ್ರಿಕೆಗಳ ಗುಣಮಟ್ಟ ಕಡಿಮೆಯಾಗಿದೆ ಎಂದು ವಿಷಾದಿಸಿದರು. ಗ್ರಾಮೀಣ ಭಾಗದ ಅನೇಕ ಸುದ್ದಿಗಳು ಸುದ್ದಿಯಾಗುತ್ತಿಲ್ಲ. ಸುದ್ದಿ ಆಗಬಾರದ ಸುದ್ದಿಗಳೇ ಸುದ್ದಿಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಗ್ರಾಮೀಣ ಭಾಗದಲ್ಲಿ ಸುದ್ದಿ ಮಾಡುವ ಅನೇಕ ಪತ್ರಕರ್ತರಿಗೆ ಸೂಕ್ತ ತರಬೇತಿ ಇಲ್ಲದಿರುವುದೇ ಆಗಿದೆ ಎಂದರು.