ನಾಳೆ ನೂತನ ರಥ ಸಮರ್ಪಣೆ (ಸುದ್ದಿ ಸಂಕ್ಷೇಪ)
ಶಿವಮೊಗ್ಗ: ನಗರದ ದುರ್ಗಿಗುಡಿಯ ದುರ್ಗಾಪರಮೇಶ್ವರಿ ದೇವಸ್ಥಾನದ ನೂತನ ರಥ ಸಮರ್ಪಣೆ ಹಾಗೂ ಬ್ರಹ್ಮರಥೋತ್ಸವ ಮಾ.27ರಂದು ಬೆಳಗ್ಗೆ ನಡೆಯಲಿದೆ. ಮಾ.26 ರಂದು ಬೆಳಗ್ಗೆ 9 ಗಂಟೆಗೆ ದುರ್ಗಾಹೋಮ, ಶ್ರೀಸೂಕ್ತ ಹೋಮ, ರಾಜಬೀದಿ ಉತ್ಸವ ನಡೆಯಲಿದೆ. ಮಾ.27 ರಂದು ಬೆಳಗ್ಗೆ 11.30 ರಿಂದ 11.55ರ ವರೆಗೆ ಅಮ್ಮನವರ ರಥಾರೋಹಣ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗವಿರುತ್ತದೆ. ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಆಯೋಜಕರು ಕೋರಿದ್ದಾರೆ.
ತೀರ್ಥಹಳ್ಳಿಯ ಅಶ್ವಿನಿಗೆ ಚಿನ್ನ
ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಅಶ್ವಿನಿಯವರು ಕುವೆಂಪು ವಿವಿ ಎಂ.ಎಸ್ಸಿ. ಅನ್ವಯಿಕ ರಸಾಯನಶಾಸ್ತ್ರದಲ್ಲಿ ಮೊದಲ ರ್ಯಾಂಕ್ ಪಡೆದು ಚಿನ್ನದ ಪದಕ ಗಳಿಸಿದ್ದಾರೆ. ಇತ್ತೀಚೆಗೆ ನಡೆದ ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಅವರಿಗೆ ಕುಲಪತಿ ಪ್ರೊ. ಎಸ್.ಎ. ಬಾರಿಯವರು ಪ್ರಶಸ್ತಿ ಪ್ರದಾನ ಮಾಡಿದರು.