ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನಿಸ್ವಾರ್ಥ ಸೇವೆಯಿಂದ ಅಧಿಪತ್ಯ ಸಾಧ್ಯ

Rashmi Kasaragodu
Updated On : 26 Mar 2013, 10:31 am

ಚಿಕ್ಕಮಗಳೂರು: ಯಾವುದೇ ಕ್ಷೇತ್ರದಲ್ಲಾಗಲೀ ಧೀರ್ಘಕಾಲ ಅಧಿಪತ್ಯ ಮೆರೆಯಲು ಉತ್ತಮ ಸೇವೆಯಿಂದ ಮಾತ್ರ ಸಾಧ್ಯ. ವಿಶೇಷತೆ ಇಲ್ಲದ ಸೇವೆಯಿಂದ ನಮ್ಮ ಹೆಸರು ಉಳಿಯುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ  ಹೇಳಿದ್ದಾರೆ.
ಭಗವತಿ ಗ್ರಾಫಿಕ್ಸ್ ಸಂಸ್ಥೆಗೆ 25 ವರ್ಷ ತುಂಬಿದ ಪ್ರಯುಕ್ತ ಚಿಕ್ಕಮಗಳೂರು ಜಿಲ್ಲಾ ಮುದ್ರಣಕಾರರ ಸಂಘದ ಬಳಗದವರು ನಗರದ ಮಲ್ಲಂದೂರು ರಸ್ತೆಯಲ್ಲಿರುವ ಸೂರಿ ಕಾಂಪ್ಲೆಕ್ಸ್‌ನಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಲೀಕರಾದ ಹರೀಶ್‌ರನ್ನು ಸನ್ಮಾನಿಸಿ ಮಾತನಾಡಿದ ಅವರು, ನಿಸ್ವಾರ್ಥ ಹಾಗೂ ಉತ್ತಮ ಸೇವೆಯಿಂದ ಜನರ ವಿಶ್ವಾಸವನ್ನು ಗಳಿಸಿ ಸಂಸ್ಥೆಯು ಹೆಚ್ಚುಕಾಲ ವ್ಯವಹಾರ ನಡೆಸುತ್ತಿದೆ ಎಂದರು.
ಸಮಾಜದಲ್ಲಿ ಮುದ್ರಣಕಾರರ ಪಾತ್ರ ಅತ್ಯಂತ ಮುಖ್ಯವಾದುದು. ಮುದ್ರಣವು ಕೇವಲ ವ್ಯವಹಾರವಷ್ಟೆ ಅಲ್ಲದೆ ಅದೊಂದು ಕಲೆಯಾಗಿದೆ. ವಿಶೇಷ ವಿನ್ಯಾಸಗಳ ಜೊತೆಗೆ ಅಕ್ಷರಗಳ ಬಳಕೆ ಮುದ್ರಣ ಕೇತ್ರದ ವಿಶೇಷತೆ ಎಂದು ಹೇಳಿದರು.
ಬಿಜೆಪಿ ಮುಖಂಡ ಟಿ. ರಾಜಶೇಖರ್ ಮಾತನಾಡಿ, ಸಾರ್ವಜನಿಕರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಆಹ್ವಾನ ಪತ್ರಿಕೆಗಳನ್ನು ನಿಗಧಿತ ಸಮಯದಲ್ಲಿ ನೀಡಿ ಜನರ ವಿಶ್ವಾಸವನ್ನು ಗಳಿಸಿದ್ದಾರೆ. 25 ವರ್ಷಗಳ ಕಾಲ ನಿರಂತರ ಸೇವೆ ನೀಡಿರುವುದು ಅತ್ಯಂತ ಹೆಮ್ಮೆಯ ವಿಷಯ. ಮುದ್ರಣ ಕ್ಷೇತ್ರವು ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಬದಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗಾಯಿತ್ರಿ ಪ್ರೆಸ್ ಮಾಲೀಕರಾದ ಮಂಜುನಾಥ್ ಜೋಷಿ, ವೇಣುಗೋಪಾಲ್, ಪ್ರಕಾಶ್ ಸಿಂಗ್, ರಾಮದಾಸ್ ಪ್ರಭು, ಮುದ್ರಣಕಾರರ ಸಂಘದ ಅಧ್ಯಕ್ಷ ನರೇಂದ್ರ, ಕಾರ್ಯದರ್ಶಿ ಗೋಪಿನಾಥ್, ಗುರು, ಇತರರು  ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement