ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬಾಲಕಿಗೆ ಲೈಂಗಿಕ ಕಿರುಕುಳ; ಆರೋಪಿಗೆ ಜಾಮೀನು ನಕಾರ

Rashmi Kasaragodu
Updated On : 26 Mar 2013, 10:29 am

ಕ.ಪ್ರ.ವಾರ್ತೆ ಟಿ ಬೆಂಗಳೂರು ಟಿ  ಮಾ.25
ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಬಂಧಿತನಾಗಿರುವ ವ್ಯಕ್ತಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
ಮೂಡಿಗೆರೆಯ ಕಿರಣ್ ಎಂಬುವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ನಾಗಮೋಹನದಾಸ್ ಅವರಿದ್ದ ಏಕಸದಸ್ಯ ಪೀಠ  ಈ ಆದೇಶ ನೀಡಿದೆ.
ಮೂಡಿಗೆರೆ ನಗರದಲ್ಲಿ ಮನೆಯೊಂದರಲ್ಲಿ  ಕೆಇಬಿ ಸಿಬ್ಬಂದಿ ಕಿರಣ್ ಎಂಬಾತ ವಿದ್ಯುತ್ ಮೀಟರ್ ಪರಿಶೀಲಿಸಲು  ಹೋದ ಸಂದರ್ಭದಲ್ಲಿ ಶಾಲೆಯಿಂದ ಮರಳಿದ 12 ವರ್ಷದ ಬಾಲಕಿ ಬಟ್ಟೆ ಬದಲಾಯಿಸುತ್ತಿದ್ದಳು. ಈ ಸಂದರ್ಭದಲ್ಲಿ ಕಿರಣ್ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ
ಆಕೆಯ ಪೋಷಕರು ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು.  ಅಧೀನ ನ್ಯಾಯಾಲಯಗಳು ಕಿರಣ್‌ಗೆ ಜಾಮೀನು ನಿರಾಕರಿಸಿದ್ದವು. ಇದನ್ನು ಪ್ರಶ್ನಿಸಿ ಕಿರಣ್ ಹೈಕೋರ್ಟ್ ಮೊರೆ ಬಂದಿದ್ದನು.
ಆದರೆ, ಇಂತಹ ಪ್ರಕರಣಗಳಿಗೆ ಜಾಮೀನು ನೀಡಲಾಗದು ಎಂದು ಸ್ಪಷ್ಟಪಡಿಸಿದ ಪೀಠ, ಅರ್ಜಿಯನ್ನು ವಜಾಗೊಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement