ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮತದಾರರು ಜೆಡಿಎಸ್ ಗೆಲ್ಲಿಸಲಿದ್ದಾರೆ: ದತ್ತ ವಿಶ್ವಾಸ

Rashmi Kasaragodu
Updated On : 26 Mar 2013, 10:30 am

ಕ.ಪ್ರ ವಾರ್ತೆ, ಕಡೂರು, ಮಾ.25
ಜಾತಿ ಆಧಾರಿತವಾಗಿ ಚುನಾವಣೆ ನಡೆಯುವ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಭಾರಿ ಜಾತಿರಹಿತ ಅಭಿಮಾನವು ಮತಗಳಾಗಿ ಪರಿವರ್ತನೆಯಾಗುವ ಮೂಲಕ ಮತದಾರ ಪ್ರಭುಗಳು ಜೆಡಿಎಸ್ ಗೆಲ್ಲಿಸಲಿದ್ದಾರೆಂದು  ಮಾಜಿ ವಿಧಾನ ಪರಿಷತ್ ಸದಸ್ಯ, ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿ. ದತ್ತ ಹೇಳಿದರು.
ಅವರು ಕಡೂರು ಕೋಟೆಯ ಶಂಕರಮಠದಲ್ಲಿ ಚುನಾವಣಾ ಪೂರ್ವಭಾವಿಯಾಗಿ ನಡೆದ ಕಡೂರು ಕ್ಷೇತ್ರದ  ಜೆಡಿಎಸ್ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಮಾತನಾಡಿದರು.
ಈ ಭಾರಿ ಜಾತಿ ಆಧಾರದ ಮೇಲೆ ಚುನಾವಣೆ ನಡೆಯುತ್ತಿರುವ ಸಂಪ್ರದಾಯ ಮುರಿಯಲಿದೆ. ಜನತಂತ್ರ  ವ್ಯವಸ್ಥೆಯಲ್ಲಿ ಹಗರಣಗಳ ಸರಮಾಲೆಯಲ್ಲಿರುವ ಪಕ್ಷ ಬೇಕೋ ಅಥವಾ ಜನರಿಗೆ ಸ್ಪಂದಿಸುವ ದತ್ತ ಬೇಕೋ  ಎಂಬುದನ್ನು ಮತದಾರರು ತೀರ್ಮಾನಿಸಲಿದ್ದಾರೆ.
ಹೆಚ್ಚು ಮತ ನೀಡಿ: ಕಳೆದ ಬಾರಿ ಜಾತಿ ರಾಜಕಾರಣ ಅಳಿಸಿ ಪ್ರೀತಿ ರಾಜಕಾರಣ ಬೆಳೆಸಿ ಎಂಬುದಕ್ಕೆ ಮನ್ನಣೆ ನೀಡಿ ನಲವತ್ತು ಸಾವಿರಕ್ಕೂ ಹೆಚ್ಚು ಮತನೀಡಿ ದತ್ತನ ಅಭಿಮಾನದ ಜಾತಿಗೆ ಮಾತ್ರ ಬೆಲೆ ಕೊಟ್ಟರು. ನನ್ನ ವಿ.ಪ. ಸದಸ್ಯರ ಅವಧಿಯಲ್ಲಿ ಜನರಿಗಾಗಿ ಕೈಗೊಂಡ ರಸ್ತೆ, ಕುಡಿವ ನೀರು, ಸಮುದಾಯ ಭವನಗಳು ಹಾಗು ಮೂಲಭೂತ ಸವಲತ್ತು ಸೇರಿದಂತೆ ಜನಪರ ಕಾರ್ಯಗಳಿಂದಾಗಿ ಜನ ನನಗೆ ಆಶೀರ್ವಾದ ಮಾಡಲಿದ್ದಾರೆ. 2008ರಲ್ಲಿ ವ್ಯಕ್ತಿಯ ವಿರುದ್ದ ಮತ್ತು 2010ರಲ್ಲಿ ಭ್ರಷ್ಟ ವ್ಯವಸ್ಥೆಯ ವಿರುದ್ದ ಎದುರಿಸಿದ ಚುನಾವಣೆಯಲ್ಲಿ ಮತದಾರರು ನನ್ನ ಕೈ ಬಿಡದೆ ಹೆಚ್ಚಿನ ಮತ ನೀಡಿದಂತೆ ಈ ಭಾರಿ ಹೆಚ್ಚು ಮತ ನೀಡಲಿದ್ದಾರೆ ಎಂದರು.
ಜೆಡಿಎಸ್ ಗೆಲವು: ಜೆಡಿಎಸ್ ನಗರ ಘಟಕದ ಕಾರ್ಯಾಧ್ಯಕ್ಷ ಭಂಢಾರಿ ಶ್ರೀನಿವಾಸ್ ಮಾತನಾಡಿ, ಜೆಡಿಎಸ್ ಕಾರ್ಯಕರ್ತರು, ಮುಖಂಡರು ಯಾವುದೇ ಸೋಲಿನಿಂದ ಕಂಗೆಟ್ಟಿಲ್ಲ. ಬರುವ ಚುನಾವಣೆಯಲ್ಲಿ ದತ್ತ ಅವರನ್ನು ಗೆಲ್ಲಿಸಲು ಎಲ್ಲ ಕಾರ್ಯಕರ್ತರು ಕಂಕಣ ಕಟ್ಟಿ ನಿಂತಿದ್ದಾರೆ ಎಂದರು.
ಜೆಡಿಎಸ್ ನಗರ ಘಟಕದ ಅಧ್ಯಕ್ಷ ಕೆ.ವಿ. ವಾಸು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಭಂಢಾರಿ  ಶ್ರೀನಿವಾಸ್, ಮಹೇಶ್ವರಪ್ಪ, ನಾಗರಾಜು, ಸೋಮಯ್ಯ, ಲಕ್ಕಣ್ಣ, ತಿಪ್ಪೇಶ್, ಪಾಪಣ್ಣ, ಜಯಮ್ಮ, ಸತೀಶ್ ನಾಯ್ಕ, ಶಿವರತನ್, ರಮೇಶ್, ನಿಂಗಪ್ಪ, ಹರೀಶ್, ಮಂಜುನಾಥ್ ಪ್ರಸನ್ನ, ಪ್ರಶಾಂತ್, ಶೇಖರ್, ಇದ್ದರು. ಬೆಳಗೆರೆ ಕೃಷ್ಣಶಾಸ್ತ್ರಿಗಳ ನಿಧನಕ್ಕೆ ಮೌನಾಚರಣೆ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement