ಓದು -ಏಕಾಗ್ರತೆ ಅವಲೋಕನ ನಾಳೆ
ತರೀಕೆರೆ: ಎಸ್.ಜೆ.ಎಂ.ಪ್ರಥಮ ದರ್ಜೆ ಕಾಲೇಜು ಗ್ರಂಥಾಲಯ ವಿಭಾಗ, ಕನ್ನಡ ವೇದಿಕೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತರೀಕೆರೆ ಶಾಖೆ ವತಿಯಿಂದ ಮಾರ್ಚಿ 28 ರಂದು ಬೆಳಿಗ್ಗೆ 11 ಗಂಟೆಗೆ ಕಾಲೇಜು ಸಭಾಂಗಣದಲ್ಲಿ ಯಂಡಮೂರಿ ವೀರೇಂದ್ರನಾಥರ ಓದು-ಏಕಾಗ್ರತೆ ಪುಸ್ತಕ ಕುರಿತು ವಿದ್ಯಾರ್ಥಿಗಳ ಅವಲೋಕನ ಸಮಾರಂಭವನ್ನು ಏರ್ಪಡಿಸಲಾಗಿದೆ. ಶಿವಮೊಗ್ಗ ಬಸವಕೇಂದ್ರ ಚರಮೂರ್ತಿಗಳು ಶ್ರೀ ಮರುಳಸಿದ್ದ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಲಿದ್ದಾರೆ. ಪ್ರಾಚಾರ್ಯರು ಅಧ್ಯಕ್ಷತೆ ವಹಿಸಲಿದ್ದಾರೆ.