ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಕೊಲೆ ಪ್ರಕರಣ ಕೈಬಿಡುವ ಸಂಚು'

Rashmi Kasaragodu
Updated On : 27 Mar 2013, 10:48 am

ಕ.ಪ್ರ.ವಾರ್ತೆ ಟಿ ಮೂಡಿಗೆರೆ ಟಿ  ಮಾ.26
ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಪತಿಯೊಬ್ಬ ಐದು ಮಂದಿಗೆ ಸೇರಿ ಪತ್ನಿಯನ್ನೇ  ಉಸಿರುಗಟ್ಟಿಸಿ ಕೊಲೆಗೆ ಯತ್ನಿಸಿರುವ ಪ್ರಕರಣವನ್ನು ಮೂಡಿಗೆರೆ ವೃತ್ತ ನಿರೀಕ್ಷಕರು ಮತ್ತು ಬಣಕಲ್ ಠಾಣಾಧಿಕಾರಿ ಚಾರ್ಜ್‌ಶೀಟ್‌ನಿಂದ ಕೈಬಿಡುವ ಸಂಚು ನಡೆಸಿದ್ದಾರೆ ಎಂದು ಮುಸ್ಲಿಂ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕಿರುಗುಂದ ಅಬ್ಬಾಸ್ ಆರೋಪಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ಫೆ. 24ರಂದು ಬಣಕಲ್ ಪೊಲೀಸ್ ಠಾಣೆ ಸಮೀಪವಿರುವ ಶಾಂತಿನಗರ ಬಡಾವಣೆಯ ರಫೀಕ್ ಮತ್ತಿತರೆ ಐದು ಮಂದಿ ವಿರುದ್ಧ ವರದಕ್ಷಿಣೆ ಕಿರುಕುಳ, ಕೊಲೆ ಪ್ರಯತ್ನದ ಬಗ್ಗೆ ಆತನ ಪತ್ನಿ ಜೋಹರಾ ದೂರು ನೀಡಿದ್ದರು. ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಬಿಡುಗಡೆ: ಮಾ.6ರಂದು ಪ್ರಕರಣದಲ್ಲಿ ಆರೋಪಿಗಳಿಗೆ ಸ್ಟೇಷನ್ ಜಾಮೀನು ನೀಡಿರುವ ಠಾಣಾಧಿಕಾರಿ ಹೊಸಕೇರಪ್ಪ  ಪ್ರಕರಣವಿದ್ದಂತೆ ಆರೋಪಿಗಳನ್ನು ಬಿಡುಗಡೆಗೊಳಿಸಿದ್ದಾರೆ. ಅತ್ಯಾಚಾರ ಸಂಬಂಧಿ ಪ್ರಕರಣಗಳಿಗೆ ಠಾಣಾ ಮುಚ್ಚಳಿಕೆ ನೀಡುವುದನ್ನು ರದ್ದುಪಡಿಸಿ ಗೃಹ ಇಲಾಖೆ ಆದೇಶಿಸಿದ್ದರೂ, ಮೂಡಿಗೆರೆ ವೃತ್ತ ನಿರೀಕ್ಷಕರು ಮತ್ತು ಬಣಕಲ್ ಠಾಣಾಧಿಕಾರಿಗಳು ಕಾನೂನಿನ ಕಣ್ಣಿಗೆ ಮಣ್ಣೆರಚಿ ದ್ರೋಹ ಎಸಗಿದ್ದಾರೆ ಎಂದು ಅಬ್ಬಾಸ್ ಆರೋಪಿಸಿದ್ದಾರೆ.
ಈ ನಡುವೆ ರಫೀಕ್ ಮೊದಲಾದವರು ಮಾ.10ರಂದು ಕಕ್ಕಿಂಜೆ ಗ್ರಾಮದ ಜೋಹರಾಳ ತವರು ಮನೆಗೆ ತೆರಳಿ ಅವಾಚ್ಯ ಶಬ್ದದಿಂದ ನಿಂದಿಸಿ ಆಸಿಡ್ ಎರಚಿ ಕೊಲ್ಲುವುದಾಗಿ ಬೆದರಿಸಿರುವ ಬಗ್ಗೆ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದೆ.
ಪ್ರರಕಣದ ಚಾರ್ಜ್‌ಶೀಟ್ ಸಿದ್ಧಪಡಿಸುತ್ತಿರುವ ಪೊಲೀಸರು ಪ್ರಕರಣದಿಂದ 307 ಕಲಂ ಕೈಬಿಡುವ ವ್ಯವಸ್ಥಿತ ಷಡ್ಯಂತ್ರ ನಡೆಸಿದ್ದಾರೆ. ಘಟನೆ ಸಂಬಂಧ ರಾಜ್ಯ ಮಹಿಳಾ ಆಯೋಗ, ಮಾನವ ಹಕ್ಕುಗಳ ಆಯೋಗ ಸಹಿತ ಗೃಹ ಇಲಾಖೆಗೆ ದೂರು ನೀಡಲಾಗಿದೆ ಎಂದು ಅಬ್ಬಾಸ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement