ಕ್ರಿಕೆಟ್ ಕ್ಲಬ್ ಅಧ್ಯಕ್ಷಗೆ ಸನ್ಮಾನ
ಕ.ಪ್ರ.ವಾರ್ತೆ ಟಿ ನ.ರಾ. ಪುರ ಟಿ ಮಾ.26
ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ 11 ನೇ ವಾರ್ಡಿನಿಂದ ಜಯಗಳಿಸಿದ ಲೆದರ್ ಬಾಲ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಪಿ.ಆರ್. ಸುಕುಮಾರ್ ಅವರನ್ನು ಕ್ಲಬ್ನ ಆಟಗಾರರು ಮಂಗಳವಾರ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಪಟ್ಟಣ ಪಂಚಾಯ್ತ ಸದಸ್ಯ ಪಿ.ಆರ್.ಸುಕುಮಾರ್, ಕ್ಲಬ್ನ ಏಳಿಗೆಗಾಗಿ ಎಲ್ಲಾ ಆರ್ಥಿಕ ಸಹಾಯ ನೀಡುತ್ತೇನೆ. ಯುವ ಆಟಗಾರರ ಭವಿಷ್ಯ ರೂಪುಗೊಂಡರೆ ನಮ್ಮ ಪ್ರಯತ್ನ ಸಾರ್ಥಕವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಚೈತನ್ಯ ಕ್ಲಬ್ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ತರಬೇತಿದಾರ ವಸಂತ್ ಮಾತನಾಡಿದರು.
ನಂತರ ಕ್ಲಬ್ ಅಧ್ಯಕ್ಷರು ಚುನಾವಣೆಯಲ್ಲಿ ಜಯ ಗಳಿಸಿದ ಸವಿ ನೆನಪಿಗಾಗಿ ಎರಡು ತಂಡಗಳ ನಡುವೆ ಸೌಹಾರ್ದಯುತ ಕ್ರಿಕೆಟ್ ಪಂದ್ಯ ನಡೆಯಿತು. ಕ್ಲಬ್ನ ಕಾರ್ಯದರ್ಶಿ ಗಿರಿರಾಜ್ ಕಾರ್ಯಕ್ರಮ ನಿರೂಪಿಸಿದರು.