ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕ್ರೀಡೆಯಿಂದ ದೇಹ, ಮನಸ್ಸು ಉಲ್ಲಾಸ: ಪ್ರೊ. ಸಜ್ಜನ ಶೆಟ್ಟರ್

Rashmi Kasaragodu
Updated On : 27 Mar 2013, 10:49 am

ಕ.ಪ್ರ. ವಾರ್ತೆ, ತರೀಕೆರೆ, ಮಾ.26
ಕ್ರೀಡೆಯಿಂದ ದೇಹ ಮತ್ತು ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆ ಎಂದು ಪಟ್ಟಣದ ಎಸ್‌ಜೆಎಂ ಪ್ರಧಮ ದರ್ಜೆ ಕಾಲೇಜು ಪ್ರಾಚಾರ್ಯ ಪ್ರೊ. ಕೆ.ವಿ. ಸಜ್ಜನ ಶೆಟ್ಟರ್ ತಿಳಿಸಿದ್ದಾರೆ.
ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಸರ್ಕಾರಿ ನೌಕರರ ಎಲ್ಲಾ ಸಂಘಗಳು ತರೀಕೆರೆ ವತಿಯಿಂದ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿದ್ದ  ರಾಜ್ಯ ಸರ್ಕಾರಿ ನೌಕರರ ತಾಲೂಕು ಮಟ್ಟದ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕ್ರೀಡೆಯಿಂದ ಆರೋಗ್ಯವಂತ ಜೀವನ ಸಾಗಿಸಬಹುದು. ಹಿರಿಯರು ಮಕ್ಕಳನ್ನು ಹೆಚ್ಚು ಕ್ರೀಡೆಯಲ್ಲಿ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು. ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ದೇವರಾಜ್ ಮಾತನಾಡಿ, ಆರೋಗ್ಯ ಕಾಪಾಡಿಕೊಳ್ಳಲು ಯೋಗ, ಕ್ರೀಡೆ ಅಗತ್ಯವಾದುದು ಎಂದು ತಿಳಿಸಿದರು.
  ತಾಲೂಕು ಕ್ರೀಡಾ ಪರಿವೀಕ್ಷಕ ಟಿ. ಚಂದ್ರಪ್ಪ ಮಾತನಾಡಿ, ಎಲ್ಲ ಇಲಾಖೆಯ ನೌಕರರು ಕ್ರೀಡಾಕೂಟದಲ್ಲಿ ಭಾಗವಹಿಸಬೇಕು. ವಿವಿಧ ಆಟೋಟಗಳ ಕೌಶಲ್ಯ ತೋರಿಸಲು ಇದೊಂದು ಉತ್ತಮವಾದ ಅವಕಾಶವಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್. ನಾಗರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಪರಸ್ಪರ ಪ್ರೀತಿ ವಿಶ್ವಾಸಗಳು ಹೆಚ್ಚಾಗಿ ಬೆಳೆಯುತ್ತದೆ ಎಂದು ತಿಳಿಸಿದರು.
ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ   ಉಮೇಶ್, ಆತ್ಮ ಮತ್ತಿತರರು ಮಾತನಾಡಿದರು. ಗೋವಿಂದಪ್ಪ, ತಿಮ್ಮಯ್ಯ, ಸೇವಾನಾಯಕ್ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement