ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮ
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಮಾ.26
ಪಿಯುಸಿ ನಂತರ ಮುಂದೇನು...ಸಿಇಟಿ ಪರೀಕ್ಷೆ ಹೇಗಿರುತ್ತದೆ, ಸಿಇಟಿ ಬರೆಯುವ ಉಪಯೋಗವೇನು, ಆಯ್ಕೆ ಯಾವುದಾದರೆ ಮುಂದೆ ಏನು ಲಾಭ ಎಂಬಿತ್ಯಾದಿ ಪ್ರಶ್ನೆಗಳು ಪಿಯುಸಿ ಹಂತದ ವಿದ್ಯಾರ್ಥಿಗಳಲ್ಲಿ ಕಾಡುವುದು ಸಾಮಾನ್ಯ. ಈ ವಿಚಾರದಲ್ಲಿ ವಿದ್ಯಾರ್ಥಿಗಳಿಗಿಂತ ಪೋಷಕರಿಗೆ ಪ್ರಶ್ನೆ ಏಳುವುದೇ ಹೆಚ್ಚು.
ಹೀಗಾಗಿ ಇಂತಹ ಗೊಂದಲ, ಪ್ರಶ್ನೆಗಳಿಗೆ ಸೂಕ್ತ ಉತ್ತರ ಕಂಡುಕೊಳ್ಳುವ ಉದ್ದೇಶದಿಂದ ನಗರದ ಚಿಗುರು ಅಕಾಡೆಮಿಯು ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ.
ದ್ವಿತೀಯ ಪಿಯುಸಿ ಕೆಸಿಇಟಿ ಪ್ರವೇಶ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಮಾ.28 ಮತ್ತು 29ರಂದು ಸಂಜೆ 4 ಗಂಟೆಗೆ ಉಚಿತ ತರಬೇತಿ ಹಾಗೂ ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಿದೆ.
ಹೆಸರಾಂತ ಹಾಗೂ ರಾಷ್ಟ್ರಮಟ್ಟದ ತರಬೇತಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿರುವ ತರಬೇತುದಾರರಾದ ಆರ್. ಕೃಷ್ಣಮೂರ್ತಿ (ಆರ್‌ಕೆಎಂ) ನಡೆಸಿಕೊಡಲಿದ್ದಾರೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕಾಗಿ ಹಾಗೂ ಇದೇ ದಿನ ಪೋಷಕರಿಗಾಗಿ ಹಮ್ಮಿಕೊಂಡಿರುವ ಸಂವಾದ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಅಕಾಡೆಮಿಯ ಜ್ಯೋತಿ ನಾಗರಾಜ್ ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 9481638271, 9481639271ನ್ನು ಸಂಪರ್ಕಿಸುವಂತೆ ಸಂಸ್ಥೆ ತಿಳಿಸಿದೆ. ಅಂದಹಾಗೆ ಮಾರ್ಗದರ್ಶನ ಕಾರ್ಯಕ್ರಮವು ಶಿವಮೊಗ್ಗದ ಗಾಂಧಿನಗರ ಬಿ ಮುಖ್ಯರಸ್ತೆಯಲ್ಲಿರುವ ಚಿಗುರು ಅಕಾಡೆಮಿಯಲ್ಲಿ ನಡೆಯುವುದು.