ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಸುಳ್ಳು ಭರವಸೆ ನೀಡಿದ ದತ್ತ'

Rashmi Kasaragodu
Updated On : 27 Mar 2013, 10:50 am

ಕ.ಪ್ರ.ವಾರ್ತೆ, ಕಡೂರು, ಮಾ. 26 ಜೆಡಿಎಸ್ ನಾಯಕರಾದ ವೈ.ಎಸ್.ವಿ. ದತ್ತರವರ ಸುಳ್ಳು ಭರವಸೆಯಿಂದ ಬೇಸತ್ತಿರುವ ಕಡೂರು ವಿಧಾನಸಭಾ ಕ್ಷೇತ್ರದ ಮತದಾರರು ಬರಲಿರುವ ಚುನಾವಣೆಯಲ್ಲಿ ಜೆಡಿಎಸ್ ತಿರಸ್ಕರಿಸಿ ಕಾಂಗ್ರೆಸ್ ಗೆಲ್ಲಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಹೇಶ್ ಒಡೆಯರ್ ಹೇಳಿದರು.
  ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, 2008ರಿಂದಲೂ ಕಡೂರು ಕ್ಷೇತ್ರದಲ್ಲಿ ದತ್ತರವರು ಬರೀ ಸುಳ್ಳು ಆಶ್ವಾಸನೆ ನೀಡಿ, ದಿಕ್ಕು ತಪ್ಪಿಸುವ ಹೇಳಿಕೆಗಳಿಂದ ಜನರನ್ನು ಮರುಳು ಮಾಡುತ್ತಲೇ ತಮ್ಮ ರಾಜಕೀಯ ಮಾಡಿಕೊಂಡು ಬರುತ್ತಿದ್ದಾರೆ ಎಂದು ಆರೋಪಿಸಿದರು.
  ಚುನಾವಣಾ ಸಮಯದಲ್ಲಿ ದತ್ತರವರು ಜನರಿಗೆ ಮೋಡಿ ಮಾಡುವುದಕ್ಕಿಂತ ತಮ್ಮ ವಿಧಾನಪರಿಷತ್ ಸದಸ್ಯರ ಅವಧಿಯಲ್ಲಿ ಕ್ಷೇತ್ರಕ್ಕೆ ಯಾವುದೇ ದೊಡ್ಡ ಅನುದಾನ ತಂದಿದ್ದೇ ಆದರೆ ಉದಾಹರಣೆ ಸಮೇತ ಕ್ಷೇತ್ರದ ಜನರ ಮುಂದೆ ಇಡಲಿ ಎಂದು ಸವಾಲೆಸೆದರು.
  ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೆ ಕ್ಷೇತ್ರದ ಜನರನ್ನು ವಂಚಿಸುತ್ತಾ ರಾಜಕೀಯ ಮಾಡುತ್ತಿದ್ದಾರೆ. ಇದೀಗ ವಿಧಾನಸಭಾ ಚುನಾವಣೆ ಎದುರಾಗಿದ್ದು, ಜನರು ಇವರ ಮಾತುಗಳನ್ನು ನಂಬದ ಸ್ಥಿತಿಯಲ್ಲಿದ್ದಾರೆ. ದತ್ತರವರ ಭರವಸೆಗಳಿಂದ ಬೇಸತ್ತಿರುವ ಜನರು ಕಾಂಗ್ರೆಸನ್ನು ಬೆಂಬಲಿಸಿ ಗೆಲ್ಲಿಸುವುದರಲ್ಲಿ ಸಂದೇಹವಿಲ್ಲ ಎಂದಿರುವ ಮಹೇಶ್ ಒಡೆಯರ್, ಚುನಾವಣಾ ಸಮಯದಲ್ಲಿ ಮಾತ್ರ ಜನರಿಗೆ ಭರವಸೆ ನೀಡಿ ಜನರನ್ನು ದಿಕ್ಕು ತಪ್ಪಿಸುವ ಬದಲು ಜನರಿಗೆ ನಿಜಾಂಶವನ್ನು ಹೇಳುವ ಮೂಲಕ ನೈತಿಕತೆಯನ್ನು ಉಳಿಸಿಕೊಳ್ಳುವ ರಾಜಕಾರಣ ಮಾಡಲಿ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement