ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಈಜಲು ಹೋದ ಯುವಕ ಸಾವು

Rashmi Kasaragodu
Updated On : 28 Mar 2013, 10:53 am

ಕ.ಪ್ರ.ವಾರ್ತೆ, ಮೂಡಿಗೆರೆ, ಮಾ. 27 ತಾಲೂಕಿನ ಕಳಸ ಸಮೀಪದ ಅಂಬಾ ತೀರ್ಥದಲ್ಲಿ ಈಜಲು ಹೋಗಿದ್ದ ಯುವಕನೊಬ್ಬ  ಮುಳುಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.  ಕಳಸ ಸಮೀಪದ ಕೆಳಗೂರಿನ ಸುನೀಲ್ (21) ಮತ್ತು ಆತನ ಮೂರು ಜನ ಸ್ನೇಹಿತರು ಸೇರಿ ಹೊರನಾಡು  ದೇವಾಸ್ಥನಕ್ಕೆ ಬಂದು ಅಲ್ಲಿ ಒಂದು ರಾತ್ರಿ ತಂಗಿದ್ದು, ಬುಧವಾರ ಬೆಳಗ್ಗೆ ಅಂಬಾತೀರ್ಥದ ಕಡೆ ಪ್ರಯಾಣ ಬೆಳೆಸಿದ್ದರು.
  ಮಧ್ಯಾಹ್ನ 11 ಗಂಟೆ ಸುಮಾರಿಗೆ ಅಂಬಾ ತೀರ್ಥಕ್ಕೆ ಬಂದ ನಾಲ್ಕು ಜನ ಯುವಕರು ಸ್ನಾನ ಮಾಡಲೆಂದು ಹೊಳೆಗೆ ಇಳಿದಿದ್ದಾರೆ. ಆದರೆ ಸುನೀಲ್ ಕಾಲು ಜಾರಿ ನೀರಿನ ಆಳಕ್ಕೆ ಬಿದ್ದವನು ಮೃತಪಟ್ಟಿದ್ದಾನೆ. ಬಾಳೆಹೊಳೆ  ಮುಳುಗು ತಜ್ಞ ಭಾಸ್ಕರ ಎಂಬುವವರನ್ನು ಕರೆಸಿ ಮೃತ ದೇಹವನ್ನು ಮೇಲೆತ್ತಲಾಯಿತು. ಪ್ರಕರಣ ಕಳಸ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಘಟನಾ ಸ್ಥಳಕ್ಕೆ ಕಳಸ ಪಿಎಸ್ ರಾಮಚಂದ್ರ ನಾಯಕ್ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement