ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಚೌಡೇಶ್ವರಿ ದೇವಾಲಯದ ಪ್ರತಿಷ್ಠಾನ ವರ್ಧಂತಿ ಇಂದಿನಿಂದ

Rashmi Kasaragodu
Updated On : 28 Mar 2013, 11:00 am

ಜೋಗ್‌ಫಾಲ್ಸ್:  ಜೋಗದಿಂದ ಕೇವಲ 7 ಕಿ.ಮೀ ದೂರದಲ್ಲಿರುವ ಹೊಯ್ಸಳ ಕಲಾ ವೈಭವವನ್ನು ಸಾರುವ ಕಾರ್ಗಲ್‌ನ ಶ್ರೀ ಚೌಡೇಶ್ವರಿ ದೇವಾಲಯ
15 ನೇ ಪ್ರತಿಷ್ಠಾ ವರ್ಧಂತಿ ಉತ್ಸವ ಪ್ರತಿ ವರ್ಷದಂತೆ ಈ ವರ್ಷವೂ ಸಹ ಅದ್ಧೂರಿಯಾಗಿ ಮಾ. 28ರಿಂದ 30 ರವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶ್ರೀಮದ್‌ಶ್ರೀವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿಯವರ ದಿವ್ಯ ವಾಸ್ತವ್ಯದೊಂದಿಗೆ ನಡೆಸಲು ತೀರ್ಮಾನಿಸಲಾಗಿದೆ.
ಮಾ. 28 ರಂದು ದೇವರಿಗೆ ಸರ್ವಾಲಂಕಾರ ಪೂಜೆ, ಸಂಜೆ 7 ಗಂಟೆಗೆ ಮೀಜಿಯವರನ್ನು ದೇವಾಲಯದ ಮಹಾದ್ವಾರದ ಬಳಿ ಪೂರ್ಣಕುಂಭದೊಂದಿಗೆ ಬರಮಾಡಿಕೊಳ್ಳುವುದರ ಮೂಲಕ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಲಿದೆ.
ಸಂಜೆ ಗಾಯಕಿ ಎಂ.ಡಿ. ಪಲ್ಲವಿ ಮತ್ತು ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ದಿನಾಂಕ 29 ರಂದು ಸಾಮೂಹಿಕ ಗಣಹೋಮ, ಸಂಜೆ 7 ಗಂಟೆಗೆ ಶ್ರೀಗಳವರ ಅಮೃತ ಹಸ್ತದಿಂದ ಶ್ರೀ ದೇವರ ಉತ್ಸವ ಮೂರ್ತಿಯ ರಥಾರೋಹಣ ನಂತರ ರಥೋತ್ಸವ ನಡೆಯಲಿದ್ದು, ರಾತ್ರಿ 9.30 ಕ್ಕೆ ರತ್ನಾವತಿ ಕಲ್ಯಾಣ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಮಾ. 30 ರಂದು ಸಾಮೂಹಿಕ ಸತ್ಯನಾರಾಯಣ ಪೂಜೆ, ಪ್ರತಿಭಾ ಪುರಸ್ಕಾರ ಮತ್ತು ಸ್ಥಳೀಯ ಕಲಾವಿದರಿಂದ ನಗೆ ಹಬ್ಬ ಹಾಗೂ ಮಕ್ಕಳಿಂದ ಕೃಷ್ಣವೇಷ ಸ್ಪರ್ಧೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement