ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ದಾಸ ಸಾಹಿತ್ಯ ಮುಕ್ತಿಗೆ ದಾರಿದೀಪ

Rashmi Kasaragodu
Updated On : 28 Mar 2013, 10:54 am

ಕ.ಪ್ರ.ವಾರ್ತೆ ಟಿ ತರೀಕೆರೆ ಟಿ  ಮಾ.27
ದಾಸ ಸಾಹಿತ್ಯ ಮುಕ್ತಿ ಮಾರ್ಗಕ್ಕೆ ದಾರಿದೀಪ ಎಂದು ತಿರುಪತಿ ತಿರುಮಲ ದೇವಸ್ಥಾನ ತಿರುಪತಿ ದಾಸ ಸಾಹಿತ್ಯ ಪ್ರಾಜೆಕ್ಟ್ ವಿಶೇಷಾಧಿಕಾರಿ ಆನಂದತೀರ್ಥಾಚಾರ್ಯ ಹೇಳಿದರು.  ಬುಧವಾರ ಶ್ರೀವತ್ಸ ಭಜನಾ ಮಂಡಳಿ, ಶ್ರೀವಾರಿ ಭಜನಾ ಮಂಡಳಿಯಿಂದ ಪಟ್ಟಣದ ಮಹಾಮಹಿಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲಾಗಿದ್ದ ಭಜನಾ ಮಂಡಳಿಗಳ ನವೀಕರಣ ಸಮಾರಂಭದಲ್ಲಿ ಮಾತನಾಡಿದರು.
ದೊಡ್ಡ ಕೊಡುಗೆ: ಭಗವಂತ ಕೇಳುವುದು ಶುದ್ಧ ಮತ್ತು ನಿರ್ಮಲವಾದ ಮನಸ್ಸು, ಭಗವಂತನಿಗೆ ಭಕ್ತಿಯ ಕಾಣಿಕೆ ನೀಡಬೇಕು. ಭಗವಂತನಿಗೆ ಭಕ್ತರನ್ನು ಕಂಡರೆ ಸಂತೋಷ, ಮನುಷ್ಯ ಜನ್ಮ ದೇವರು ಕೊಟ್ಟ ಬಹುದೊಡ್ಡ ಕೊಡುಗೆ. ದೇವರನ್ನು ನಂಬಿದರೆ ಆತ ಕೈ ಬಿಡುವುದಿಲ್ಲ. ಎಂದು ತಿಳಿಸಿದ ಅವರು ಭಕ್ತರು ಗಾಯನ ಮಾಡಿದ ಸ್ಥಳದಲ್ಲಿ, ಭಜನೆ ಮಾಡಿದ ಭಕ್ತರ ಹೃದಯದಲ್ಲಿ ದೇವರು ನೆಲೆಸಿರುತ್ತಾರೆ ಎಂದು  ತಿಳಿಸಿದರು.
ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಎ.ವಿ. ನಾಗಭೂಷಣ್ ಮಾತನಾಡಿ, ಎಲ್ಲ ಭಜನಾ ಮಂಡಳಿಗಳು ಪಟ್ಟಣದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೇರವಾದ ಕೇಂದ್ರ ಬಿಂದುವಾಗಿದೆ. ದೇವಸ್ಥಾನದಲ್ಲಿ ರಾಮೋತ್ಸವ, ಹನುಮೋತ್ಸವ ಸುಬ್ರಹ್ಮಣ್ಯ ರಥೋತ್ಸವ ಇತ್ಯಾದಿ ಹಲವು ಕಾರ್ಯಕ್ರಮ ನಡೆಯುತ್ತದೆ ಎಂದವರು ಹೇಳಿದರು.
ಶ್ರೀವತ್ಸ ಭಜನಾ ಮಂಡಳಿಯ ಲತಾ ಗೋಪಾಲಕೃಷ್ಣ ಮಾತನಾಡಿದರು. ವೀಣಾವಾದನ, ಭಜನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ತರೀಕೆರೆ, ಭದ್ರಾವತಿ, ಕೊಪ್ಪ, ಹರಿಹರಪುರ, ಕಡೂರು ಭಜನಾ ಮಂಡಳಿಗಳ ಮಾತೆಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement