ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನೀತಿ ಸಂಹಿತೆ: ಶಾಂತಿಸಭೆ

Rashmi Kasaragodu
Updated On : 28 Mar 2013, 10:59 am

ಕ.ಪ್ರ.ವಾರ್ತೆ, ಮೂಡಿಗೆರೆ, ಮಾ.27 ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಆಯೋಗದ ಕೆಲವು ಷರತ್ತುಗಳಿಗೆ ಬದ್ದವಾಗಿರಬೇಕು ಎಂದು ಕುದರೇಮುಖ ಇನ್ಸ್‌ಪೆಕ್ಟರ್ ರಮೇಶ್ ಕುಮಾರ್ ತಿಳಿಸಿದರು.
 ತಾಲೂಕಿನ ಕಳಸ ಪೊಲೀಸ್ ಠಾಣೆಯಲ್ಲಿ ಬುಧವಾರ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಎಲ್ಲಾ ರಾಜಕೀಯ ಮುಖಂಡರು, ಸಾರ್ವಜನಿಕರು ಹಾಗೂ ದಲಿತ ಸಂಘರ್ಷ ಸಮಿತಿಯವರನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ಪಕ್ಷ ಅಥವಾ ಅಭ್ಯರ್ಥಿಯು ವಿವಿಧ ಜಾತಿ ಅಥವಾ ಸಮುದಾಯಗಳ ನಡುವೆ, ಮತೀಯ ಅಥವಾ ಭಾಷಾ ಸಮೂಹಗಳ ಮಧ್ಯೆ ಇರುವ ವೈಮನಸ್ಯವನ್ನು ಕೆರಳಿಸುವ ಅಥವಾ ಪರಸ್ಪರ ದ್ವೇಷ  ಹುಟ್ಟಿಸುವ ಚಟುವಟಿಕೆಯಲ್ಲಿ ತೊಡಗಿಸಬಾರದು ಎಂದರು.
ಅನುಮತಿ ಅಗತ್ಯ: ದೇವಾಲಯ, ಮಸೀದಿ, ಚರ್ಚ್ ಅಥವಾ ಇತರೆ ಪೂಜಾ ಸ್ಥಳಗಳನ್ನು ಚುನಾವಣಾ ಪ್ರಚಾರ ವೇದಿಕೆಯಾಗಿ ಬಳಸಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಚುನಾವಣೆಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮ  ಮಾಡಬೇಕಾದರೂ ಸಂಬಂಧಿಸಿದ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು ಎಂದರು.
  ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗದಂತೆ ಮೆರವಣಿಗೆಯು ರಸ್ತೆಯ ಒಂದೇ ಪಾರ್ಶ್ವದಲ್ಲಿ ಸಾಗುವಂತೆ ಇರಬೇಕು. ಕಾರ್ಯಕ್ರಮ ನಡೆಸಿದ ಬಗ್ಗೆ ಖರ್ಚು, ವೆಚ್ಚ ಮಾಹಿತಿಯನ್ನು ಕಚೇರಿಗೆ ಸಲ್ಲಿಸಬೇಕು. ಚುನಾವಣಾ ಪ್ರಚಾರದ ಬ್ಯಾನರ್‌ಗಳನ್ನು ಸಭೆ ನಡೆಯುವ 2 ಗಂಟೆ ಮುಂಚಿತವಾಗಿ ಮಾತ್ರ ಹಾಕಬೇಕು ಹಾಗೂ ಸಭೆ ಮುಗಿದ 1 ಗಂಟೆ ಒಳಗಾಗಿ ತೆರವು ಮಾಡಬೇಕು ಎಂದವರು ಹೇಳಿದರು.
 ಧ್ವನಿ ವರ್ಧಕಗಳನ್ನು ಬೆಳಗ್ಗೆ 7ರಿಂದ ರಾತ್ರಿ 10ರವರೆಗೆ ಮಾತ್ರ ಬಳಸಬೇಕು. ಈ ಎಲ್ಲಾ ನಿಯಮಗಳಿಗೆ ತಪ್ಪಿದ್ದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.
 ಈ ಸಂದಭಂದಲ್ಲಿ ಕಳಸ ಠಾಣಾಧಿಕಾರಿ ರಾಮಚಂದ್ರ ನಾಯಕ್, ರಾಜಕೀಯ ಮುಖಂಡ ಎಂ.ಎ. ಶೇಷಗಿರಿ, ಮಂಜಪ್ಪಯ್ಯ, ಎಂ.ಎನ್. ಹರ್ಷ ಶ್ರೇಣಿಕ್, ಚಲ್ಲು, ವಿಶ್ವನಾಥ್, ರಫೀಕ್, ಭರತ್‌ರಾಜ್, ರುದ್ರಯಚಾರ್, ಕೃಷ್ಣ, ಜ್ವಾಲನಯ್ಯ, ಗಂಗಯ್ಯ ಮೊದಲಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement