ಬಾಬಾಬುಡನ್‌ಗಿರಿಯಲ್ಲಿ 3 ದಿನಗಳ ಉರುಸ್‌ಗೆ ಚಾಲನೆ
ಕ.ಪ್ರ ವಾರ್ತೆ ಚಿಕ್ಕಮಗಳೂರು ಮಾ.27
ನಗರದ ಬಾಬಾಬುಡನ್‌ಗಿರಿಯಲ್ಲಿ ಬುಧವಾರದಿಂದ ಆರಂಭವಾದ ಮೂರು ದಿನಗಳ ಉರುಸ್‌ಗೆ ಸಂಪ್ರದಾಯದಂತೆ ಚಾಲನೆ ಸಿಗಲಿಲ್ಲ. ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿ ಶಾಖಾದ್ರಿ, ದೇಶದ ವಿವಿಧೆಡೆ ಬಂದಿದ್ದ ಫಕೀರರು ಹಾಗೂ ಮುಸ್ಲಿಮರು ಪ್ರತಿಭಟಿಸಿದರು.
ಶಾಖಾದ್ರಿ ಪ್ರಕಾರ ಉರುಸ್‌ಗೆ ಅಧಿಕೃತವಾಗಿ ಚಾಲನೆ ಸಿಗದೆ, ಜಿಲ್ಲಾಡಳಿತದ ಆದೇಶದಂತೆ ಚಾಲನೆ ನೀಡಲಾಗಿದ್ದು, ಈ ಎಲ್ಲ ಗೊಂದಲಗಳ ನಡುವೆ ಮೊದಲ ದಿನ ಕಳೆದಿದೆ.
ಬುಧವಾರ ಮಧ್ಯಾಹ್ನ ನಗರದ ಬಡ ಮಖಾನ್‌ನಿಂದ ಗಂಧವನ್ನು ತೆಗೆದುಕೊಂಡು ಅತ್ತಿಗುಂಡಿಗೆ ತೆರಳಿ, ಅಲ್ಲಿ ಮಸೀದಿಯಲ್ಲಿ ಪೂಜೆ ಸಲ್ಲಿಸಿ ಬಳಿಕ ಬಾಬಾಬುಡನ್‌ಗಿರಿಯಲ್ಲಿರುವ ದರ್ಗಾಕ್ಕೆ ತೆರಳಲಾಯಿತು. ಈ ಸಂಬಂಧದಲ್ಲಿ ಸಾವಿರಾರು ಮುಸ್ಲಿಮರು ಪಾಲ್ಗೊಂಡಿದ್ದರು. ಬ್ಯಾರಿಕೇಡ್ ಮೂಲಕ ಭಕ್ತರು ಗುಹೆಯೊಳಗೆ ಪ್ರವೇಶಕ್ಕೆ ತೆರಳಿದರು. ಆದರೆ, ಪ್ರವೇಶ ದ್ವಾರದಿಂದ ಮುಜಾವರ್‌ಗೆ ಮಾತ್ರ ಹೋಗಲು ಅವಕಾಶ ನೀಡುವುದಾಗಿ ಅಲ್ಲಿದ್ದ ಅಧಿಕಾರಿಗಳು ಹೇಳಿದಾಗ, ಫಕೀರರಿಗೆ ಹಾಗೂ ತಮಗೂ ಅನುಮತಿ ನೀಡಬೇಕು ಎಂದು ಶಾಖಾದ್ರಿ ಸೈಯದ್ ಗೌಸ್ ಮೊಹಿಯುದ್ದೀನ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಮನವಿ ಸ್ಪಂದನೆ ಸಿಗದೇ ಹೋದಾಗ ಮುಸ್ಲಿಮರು ಪ್ರತಿಭಟನೆ ನಡೆಸಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.