ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವಾಹನ ಕಳ್ಳನ ಬಂಧನ

Rashmi Kasaragodu
Updated On : 28 Mar 2013, 10:57 am

ಕ.ಪ್ರ.ವಾರ್ತೆ ಟಿ ತರೀಕೆರೆ ಟಿ  ಮಾ.27
ಅಪಹರಣವಾಗಿತ್ತು ಎನ್ನಲಾದ ಅಂದಾಜು ರು. 15 ಲಕ್ಷ ಮೌಲ್ಯದ 2 ಟ್ರ್ಯಾಕ್ಟರ್, 4 ಬಜಾಜ್ ಡಿಸ್ಕವರಿ, 1 ಹಿರೋಹೋಂಡಾ ಮೋಟಾರ್ ಬೈಕ್‌ಗಳನ್ನು  ತರೀಕೆರೆ ಪೊಲೀಸರು ಪತ್ತೆ ಹಚ್ಚಿ ಒಬ್ಬನನ್ನು ಬಂಧಿಸಿ ವಾಹನ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ಭದ್ರಾವತಿ ತಾಲೂಕಿನ ಎರೇಹಳ್ಳಿ ವಾಸಿ ನವೀನ್ ಕುಮಾರ್ ಬಂಧಿತ. ಈತನಿಂದ ಅಪಹರಣವಾಗಿದ್ದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ತರೀಕೆರೆ ಪೊಲೀಸ್ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಸದಾನಂದ ಬಿ. ನಾಯಕ್, ಪೊಲೀಸ್ ಇನ್ಸ್‌ಪೆಕ್ಟರ್ ಎಚ್. ಎಸ್. ಸುರೇಶ್ ಅವರ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಪಿ.ಎಸ್.ಐ. ಉಲ್ಲಾಸ ಪಾರವರ, ಪಿ.ಎಸ್.ಐ. ಪೌಲ್ ಪ್ರಿಯಾಕುಮಾರ್, ಸಿಬ್ಬಂದಿ ರುದ್ರೇಶಪ್ಪ, ರಾಜಕುಮಾರ, ಸಿದ್ದಾನಾಯಕ, ಮಂಜುನಾಥ, ಗಿರೀಶ್, ಪ್ರವೀಣ್ ಆರೋಪಿಯನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement