ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕುಡಿವ ನೀರಿಗೆ ಆಗ್ರಹಿಸಿ ಪ್ರತಿಭಟನೆ

Rashmi Kasaragodu
Updated On : 29 Mar 2013, 10:58 am

ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ.28
ಸಮರ್ಪಕ ಕುಡಿಯುವ ನೀರಿಗೆ ಆಗ್ರಹಿಸಿ ಇಲ್ಲಿನ ಚಂದ್ರನಗರ ನಿವಾಸಿಗರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
  ಗೌರಮ್ಮ ನೇತೃತ್ವದಲ್ಲಿ ಮಹಿಳೆಯರು ಧರಣಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
   ಚಂದ್ರನಗರದಲ್ಲಿ ಕಳೆದ 15 ವರ್ಷಗಳ ಹಿಂದೆ ಜವಾಹರ್ ರೋಜ್ಗಾರ್ ಯೋಜನೆಯಡಿ ನೀರಿನ ಟ್ಯಾಂಕ್  ನಿರ್ಮಾಣ ಮಾಡಲಾಗಿದೆ. ಇದರಿಂದ ಚಂದ್ರನಗರಕ್ಕೆ ನೀರು ಸರಬರಾಜು ಮಾಡಲಾಗುತ್ತಿತ್ತು.
  ಆದರೆ, ಈ ಟ್ಯಾಂಕ್‌ನಿಂದ ಕರ್ಕಿಪೇಟೆ, ಕೆಂಪನಹಳ್ಳಿ ಹಾಗೂ ಬಾಳೆಹಳ್ಳಿಗಳಿಗೆ ನೀರು ಸರಬರಾಜು ಮಾಡುತ್ತಿರುವುದರಿಂದ ಚಂದ್ರನಗರದಲ್ಲಿ ಕುಡಿವ ನೀರಿನ ಅಭಾವ ತಲೆದೋರಿದೆ. ಈ ಬಗ್ಗೆ ಸಂಬಂಧಪಟ್ಟರಿಗೆ ಕೇಳಿದರೆ ಸ್ವಂತ ನಲ್ಲಿ ಸಂಪರ್ಕ ಪಡೆಯುವಂತೆ ಹೇಳುತ್ತಿದ್ದಾರೆ. ಅದುದರಿಂದ ಇಲ್ಲಿನ ನೀರನ್ನು ಚಂದ್ರನಗರದವರಿಗೆ ಮಾತ್ರ ಬಳಸಿಕೊಳ್ಳಲು ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.  ಪ್ರತಿಭಟನೆಯಲ್ಲಿ ಚಂದ್ರನಗರದ ನಿವಾಸಿಗರಾದ ಶಿವಮ್ಮ, ಜಯಮ್ಮ, ರತ್ನಮ್ಮ, ಬೀರಮ್ಮ, ಸುಶೀಲ ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement