ಯಕ್ಷಗಾನ ಎಲ್ಲ ಕಲೆಗೂ ಮುಕುಟಪ್ರಾಯ
ಕ.ಪ್ರ.ವಾರ್ತೆ, ಹೊಸನಗರ, ಮಾ.28 ವೇಷ, ಭಾಷೆಯಲ್ಲಿ ತನ್ನದೇ ಪ್ರಭುತ್ವ ಸಾಧಿಸಿರುವ ಯಕ್ಷಗಾನ ಎಲ್ಲಾ ಕಲೆಗಳ ಮುಕುಟಪ್ರಾಯವಾಗಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ ಹೇಳಿದರು.
ತಾಲೂಕಿನ ಮಾರುತಿಪುರ ಗುಬ್ಬಿಗ ರಮೇಶ ಹೆಗಡೆ ಮನೆ ಆವರಣದಲ್ಲಿ ರಾಮಾರ್ಪಣ ಕಲಾವೇದಿಕೆ ಹಮ್ಮಿಕೊಂಡ ಪರಂಪರೆಯ ಕಿರೀಟ ಪೂಜೆ ಮತ್ತು ಸಂಪ ನಿನಾದ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಗೌರವದ ಪ್ರತೀಕ: ಕಿರೀಟ ವೈಭವದ ಪ್ರತೀಕವಲ್ಲ. ತಾನು ಕುಣಿದು, ದಣಿದು ಕಲಾಪ್ರೀಯರಿಗೆ ರಸದೌತಣ ನೀಡುವ ಅರ್ಪಣಾಭಾವಕ್ಕೆ ಸಿಗುವ ಗೌರವದ ಪ್ರತೀಕ. ಶ್ರೀರಾಮರ್ಪಣ ಕಲಾವೇದಿಕೆ ಕಿರೀಟ ಪೂಜೆ ನಡೆಸಿಕೊಂಡು ಬರುತ್ತಿರುವುದನ್ನು ಶ್ಲಾಘಿಸಿದರು.
ಯಕ್ಷಗಾನ ಕೇವಲ ನಟನೆಗೆ ಮಾತ್ರ ಸೀಮಿತವಲ್ಲ. ವಾದನಕ್ಕೂ ಅಷ್ಟೆ ಮಹತ್ವದ ಸ್ಥಾನವಿದೆ. ಚಂಡೆ ವಾದನ ವಿರದ ಯಕ್ಷಗಾನವನ್ನು ಊಹಿಸಿಕೊಲ್ಳುವುದೂ ಕಷ್ಟ ಎಂದರು. ಈ ಸಂದರ್ಭದಲ್ಲಿ ಶ್ರೀಗಳು ಕಿರೀಟ ಪೂಜೆ ನೆರವೇರಿಸಿದರು ಮತ್ತು ಸಂಪ ನಿನಾದ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು.