ಶಾಖಾ ಮಠಕ್ಕೆ ಉತ್ತರಾಧಿಕಾರಿ ನೇಮಕ
ನರಸಿಂಹರಾಜಪುರ: ಜಗದ್ಗುರು ರಂಭಾಪುರೀ ವೀರ ಸಿಂಹಾಸನ ಮಹಾಪೀಠದ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ನೀಲುಗಲ್ಲ ಗಣೀಕಲ್ ಪುತ್ರ ವರ್ಗ ಪರಂಪರೆಯ ಶಾಖಾ ಹಿರೇಮಠಕ್ಕೆ ಪಂಚಾಕ್ಷರ ಶಿವಾಚಾರ್ಯರ ಉತ್ತರಾಧಿಕಾರಿಗಳನ್ನಾಗಿ ಶ್ರೀ ಸಿದ್ದರಾಮ ದೇವರು ಇವರನ್ನು ನಿಯುಕ್ತಿಗೊಳಿಸಿ ಬಾಳೆಹೊನ್ನೂರಿನ ರಂಭಾಪುರೀ ಜಗದ್ಗುರು ಪ್ರಸನ್ನ ರೇಣುಕ ವೀರ ಸೋಮೇಶ್ವರ ಶ್ರೀಗಲು ಭಕ್ತರ ಸುಮ್ಮುಖದಲ್ಲಿ ಗುರುವಾರ ಘೋಷಿಸಿದರು. ಮಠಾಧೀಶರಾದ ಪಂಚಾಕ್ಷರ ಶಿವಾಚಾರ್ಯರು ಮಾತನಾಡಿ, 5-6-2013 ರ ಬುಧವಾರ ಶುಭ ಮುಹೂರ್ತದಲ್ಲಿ ಸಿದ್ದರಾಮ ದೇವರು ಅವರಿಗೆ ರೇಣುಕ ಶಾಂತಮಲ್ಲ ಶಿವಾಚಾರ್ಯ ಶ್ರೀಗಳೆಂಬ ನೂತನ ಅಭಿದಾನದಿಂದ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಲಿದ್ದಾರೆ ಎಂದರು.