ಸಮಾಜ ಸೇವೆಯೇ ನಿಜವಾದ ಜೀವನ
ಕ.ಪ್ರ.ವಾರ್ತೆ, ಕಡೂರು, ಮಾ.28 ಉತ್ತಮ ಮೌಲ್ಯ ಅಳವಡಿಸಿಕೊಂಡು ಸಮಾಜದಲ್ಲಿ ಇತರರಿಗೆ ಸೇವೆ ನೀಡುವುದೇ ನಿಜವಾದ ಜೀವನ ಎಂದು ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ಅಧ್ಯಕ್ಷ ಗೌಸ್ಫೀರ್ ಹೇಳಿದರು. ಅವರು ಕಡೂರು ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಹ್ಯೂಮ್ಯಾನಿಟೇರಿಯನ್ ರಿಲೀಫ್ ಸೊಸೈಟಿಯಿಂದ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರು ನೀಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ನೀರಿಗಾರಿ ಪರಿತಾಪ: ಬಿರು ಬೇಸಿಗೆಯಿಂದ ಪ್ರತಿದಿನ ಬಸ್ಸಿನಲ್ಲಿ ಬಂದು ಹೋಗುವ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರು ಸಿಗುವ ತೊಂದರೆ ಇರುವುದರಿಂದ ಹಾಗೂ ನಾಗರಿಕರು ಕುಡಿಯುವ ನೀರಿಗಾಗಿ ಪ್ರತಿದಿನ ಪರಿತಪಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರತಿದಿನ ಬೇರೆ ಬೇರೆ ಕಡೆಯಿಂದ ಬಸ್ ನಿಲ್ದಾಣದಲ್ಲಿ ಬಂದು ಹೋಗುವ ಸಾವಿರಾರು ಪ್ರಯಾಣಿಕರ ನೀರಿನ ದಾಹ ನೀಗಿಸಲು ಶುದ್ಧ ಕುಡಿಯುವ ನೀರು ನೀಡುವ ಕಾರ್ಯವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. ಕೆಎಸ್ಆರ್ಟಿಸಿ ಸಾರಿಗೆ ಡಿಪೋ ವ್ಯವಸ್ಥಾಪಕ ಚನ್ನಬಸಪ್ಪ ಮಾತನಾಡಿದರು. ಅಪ್ಸರ್ ಅಹಮದ್, ಮಹಮದ್ ಶಮೀವುಲ್ಲಾ, ದಾದಾಪೀರ್, ಖಲಂದರ್, ಇಬ್ರಾಹಿಂ, ಫೈರೋಜ್, ಮೊಯಿನ್, ಇಸ್ರಾನ್, ಮುಜಾಫೀರ್, ಅಮ್ಜದ್, ಖಲೀಲ್, ಫರೂಕ್, ಸಯ್ಯದ್, ಸಮೀರ್, ಫರೀದ್ ಉಪಸ್ಥಿತರಿದ್ದರು.