ಇಂದು ಭ್ರೂಣ ಲಿಂಗ ಪತ್ತೆ ಶಾಸನ ತರಬೇತಿ ಕಾರ್ಯಾಗಾರ
ನರಸಿಂಹರಾಜಪುರ: ತಾಲೂಕು ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ತಾಲೂಕು ಮಟ್ಟದ ಸ್ವಸಹಾಯ ಗುಂಪುಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗಾಗಿ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಶಾಸನ ಕುರಿತು ತರಬೇತಿ ಕಾರ್ಯಗಾರವು ಸಾಮರ್ಥ್ಯ ಸೌಧದ ಆವರಣದಲ್ಲಿ ಮಾರ್ಚ್ 30 ರ ಶನಿವಾರ ಬೆಳಿಗ್ಗೆ 10.30 ಗಂಟೆಗೆ ನಡೆಯಲಿದೆ.
ಕಾರ್ಯಕ್ರಮವನ್ನು ನ್ಯಾಯಾಧೀಶ ವೀರಭದ್ರಯ್ಯ ಉದ್ಘಾಟಿಸಲಿದ್ದಾರೆ. ತಹಸೀಲ್ದಾರ್ ಜೆ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.
ತಾಲೂಕು ಆರೋಗ್ಯಾಧಿಕಾರಿ ಡಾ. ಸೀಮಾ, ವಕೀಲರ ಸಂಘದ ಅಧ್ಯಕ್ಷ ಜಯಪ್ರಕಾಶ್, ವಿಜಯಕುಮಾರ್, ಜ್ಯೋತಿಲಕ್ಷ್ಮಿ, ಫಾ. ಮನೋಜ್ ತೊಟ್ಟುಂಕರ ಪ್ರೇಮ್, ಮೀನಾಕ್ಷಿ ಕಾಂತರಾಜ್ ಉಪಸ್ಥಿತರಿರುವರು.