ಇಂದು ವಿಪ್ರ ಸಮ್ಮೇಳನ ಉದ್ಘಾಟನೆ
ಶೃಂಗೇರಿ: ಪಟ್ಟಣದ ರಾಜನಗರ ವಿದ್ಯಾಭಾರತೀ ಭವನದಲ್ಲಿ ಶನಿವಾರ ಕ್ಷೇತ್ರ ಮಟ್ಟದ ವಿಪ್ರ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದೆ.
ಬೆಳಿಗ್ಗೆ 9.30ಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಡಾ.ಬಿ.ಎನ್.ವಿ. ಸುಬ್ರಮಣ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಪ್ರ ಸಮ್ಮೇಳದ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎಸ್. ಚಂದ್ರಶೇಖರ್ ರಾವ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಶಕಟಪುರ ಬದರಿ ಶಂಕರಾಚಾರ್ಯ ಸಂಸ್ಥಾನದ ಚಂದ್ರ ಮೌಳೀಶ್ವರ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ.
ಹರಿಹರಪುರ ಶಾರದಾ ಲಕ್ಷ್ಮಿನೃಸಿಂಹ ಪೀಠಂ ಆಡಳಿತಾಧಿಕಾರಿ ವಿಶ್ವನಾಥನ್ ವಸ್ತುಪ್ರದರ್ಶನ ಉದ್ಘಾಟಿಸಲಿದ್ದಾರೆ. ಶಿವಮೊಗ್ಗಾದ ಶಿವಶಂಕರ್ ಚಿತ್ರಪ್ರದರ್ಶನ ಉದ್ಘಾಟಿಸಲಿದ್ದಾರೆ. ನಂತರ ವಿವಿಧ ಗೋಷ್ಠಿಗಳು ನಡೆಯಲಿದೆ.