ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಾಂಗ್ರೆಸ್ ಬಿಜೆಪಿ ಒಂದೇ ನಾಣ್ಯದ ಎರಡು ಮುಖ

Rashmi Kasaragodu
Updated On : 30 Mar 2013, 11:42 am

ಕ.ಪ್ರ.ವಾರ್ತೆ, ಮೂಡಿಗೆರೆ, ಮಾ. 29
ಕೇಂದ್ರದ ಕಾಂಗ್ರೆಸ್ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು  ಒಂದೇ ನಾಣ್ಯದ ಎರಡು ಮುಖಗಳಿದ್ದಂತಿದ್ದು, ಕೇಂದ್ರದಲ್ಲಿ ಹಗರಣಗಳ ಸುರಿಮಳೆಯಾದರೆ, ರಾಜ್ಯದಲ್ಲಿ ಬಿಜೆಪಿ ಭ್ರಷ್ಟಾಚಾರದಲ್ಲೇ ಕುರ್ಚಿಗಾಗಿ ಕಾದಾಟ ನಡೆಸಿ, ಈಗ ಮತದಾರರ ಮುಂದೆ ಮತ ಯಾಚಿಸಲು ಹೊಸ ವೇಷ ತೊಟ್ಟು  ಬರುತ್ತಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜಪ್ಪ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಪಟ್ಟಣದ ಸಿಂಧು ಟವರ್ಸ್ನಲ್ಲಿ ನೂತನ ಕಚೇರಿ ಉದ್ಘಾಟಿಸಿದ ಅವರು, ದೇಶದ ಹಾಗೂ ರಾಜ್ಯದ ಜನರು ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಕಂಗೆಟ್ಟು ಹೋಗಿದ್ದಾರೆ. ಜೆಡಿಎಸ್ ಅಧಿಕಾರದಲ್ಲಿದ್ದಾಗ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಜನಮನ್ನಣೆಗೆ ಪಾತ್ರವಾಗಿತ್ತು. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಆಂತರಿಕ ಕಚ್ಚಾಟ, ಹಗರಣಗಳಲ್ಲೇ ಸಿಲುಕಿಕೊಂಡು, ಅಧಿಕಾರಿಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಲ್ಳಲಾಗದೇ ಭ್ರಷ್ಟಾಚಾರದಲ್ಲೇ ದಿನ ಕಳೆಯಿತು ಎಂದು ಆರೋಪಿಸಿದ್ದಾರೆ.
ಮರಳಿಗೆ ಹಾಹಾಕಾರ: ಲಂಚ ತಾಂಡವವಾಡುತ್ತಿದೆ. ಮಲೆನಾಡು ಭಾಗದಲ್ಲಿ ಜನರ ಜೀವ ನದಿ ಹೇಮಾವತಿ ನದಿಯನ್ನು ಮೃತ್ಯು ಕೂಪಕ್ಕೆ ತಳ್ಳುವುದರ ಮೂಲಕ ಮರಳಿಗೆ ಕೃತಕ ಹಾಹಾಕಾರ ಉಂಟು ಮಾಡಿದ್ದಾರೆ ಎಂದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಎಂ.ಎಸ್. ಬಾಲಕೃಷ್ಣ ಕೆಜೆಪಿಯಿಂದ ಜೆಡಿಎಸ್ಗೆ ಆಗಮಿಸಿದ ರಂಜನ್ ಅಜಿತ್ ಕುಮಾರ್ ಮತ್ತು ತಂಡದ ಸದಸ್ಯರನ್ನು ಬರ ಮಾಡಿಕೊಂಡರು.
   ಜಿ.ಪಿ. ಚೇತನ್, ಬಿ.ಎಂ. ಭೈರೇಗೌಡ, ಕಣಚೂರ್ ರಾಜೇಂದ್ರ, ಜಿ.ಯು.ಚಂದ್ರೇಗೌಡ ಗಬ್ಬಳ್ಳಿ, ಅಜೀತ್ ಕುಮಾರ್, ನಾಗೇಂದ್ರ, ವಕೀಲರಾದ ವಿಶಾಲಾ ನಾಗರಾಜ್, ನಾಗರಾಜ್, ಲೋಹಿತ್, ರಮೇಶ್, ಇಸ್ಮಾಯಿಲ್, ಎಚ್.ಪಿ. ದೇವರಾಜ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement